ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಶ್ರೀ ದೇವರ ಉತ್ಸವ ಬಲಿ ಹಾಗೂ ಕೊಪ್ಪಲ ಸವಾರಿ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ಪ್ರಾತಃಕಾಲದ ಪೂಜೆ ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವರ ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಬೊಂಬೆ ರಥೋತ್ಸವ,ಶ್ರೀ ದೇವರನ್ನು ಸಣ್ಣ ರಥದಲ್ಲಿ ಕುಳ್ಳಿರಿಸಿ ಕೊಪ್ಪಲ ಸವಾರಿ, ಕಟ್ಟೆ ಪೂಜೆ, ವಸಂತ ಮಂಟಪದಲ್ಲಿ ಪೂಜೆ ನಡೆಯಿತು.
ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು ಹಾಗೂ ಲಿಂಗಪ್ಪ ಶೇರಿಕಾರ್ ಅವರಿಂದ ವಿಶೇಷ ನಾಗಸ್ವರ ವಾದನ ನಡೆಯಿತು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮುಲ್ಕಿ ಠಾಣಾ ಎಎಸ್ಸೈ ಚಂದ್ರಶೇಖರ,ಸುನಿಲ್ ಆಳ್ವ, ವೆಂಕಟೇಶ್ ಹೆಬ್ಬಾರ್, ಚಂದ್ರಶೇಖರ ಸುವರ್ಣ, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ದಿನೇಶ್ ಹೆಗ್ಡೆ ಮಾನಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/03/2022 08:09 am