ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಕುಜಿಂಗಿರಿ ಶ್ರೀ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಸಪರಿವಾರ ಸಾಹಿತ ಶ್ರೀ ರಕ್ತೇಶ್ವರಿ ದೇವಿಗೆ ನವೋತ್ತರ ಶತ ಬ್ರಹ್ಮಕುಂಭಾಭಿಷೇಕ, ಚಂಡಿಕಾಯಾಗ, ನಾಗಬ್ರಹ್ಮಾದಿ ಪರಿವಾರ ದೇವರಿಗೆ ನವಕ ಕಲಶಾಭಿಷೇಕ ಆಶ್ಲೇಷಾ ಬಲಿ, ಅಶ್ವಥ ಪೂಜೆ ವೇದಮೂರ್ತಿ ಕಳತ್ತೂರು . ಕರುಣಾಕರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ರಕ್ತೇಶ್ವರಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಈ ಸಂದರ್ಭ ರಾಮಮೂರ್ತಿರಾವ್, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಶ್ವನಾಥ ರಾವ್, ದೇವಪ್ರಸಾದ್ ಪುನರೂರು, ಪುರಂದರ ಶೆಟ್ಟಿಗಾರ್, ರವಿ ಶೆಟ್ಟಿ ಪುನರೂರು ಗುತ್ತು, ಗೋಪಿನಾಥ್ ರಾವ್, ಸುಧಾಕರ್ ರಾವ್ ಪುನರೂರು, ರಾಘವೇಂದ್ರರಾವ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/02/2022 04:48 pm