ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಆಟೋರಿಕ್ಷಾ ಚಾಲಕರು ಊರಿನ ರಾಯಭಾರಿಗಳು"

ಮುಲ್ಕಿ: ಕಾರ್ನಾಡ್ ಶಾರದಾ ಇನ್ಫ್ರಾಡಿಸೈನ್ ಇಂಡಿಯಾ 25ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಲ್ಕಿ ರಿಕ್ಷಾ ಚಾಲಕ ಹಾಗೂ ಮಾಲೀಕರಾಗಿದ್ದು, ಹಲವಾರು ವರ್ಷಗಳಿಂದ ಚಾಲಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ ಆನಂದ ಸುವರ್ಣ, ಕೃಷ್ಣಪ್ಪ ಎಸ್.ಸನಿಲ್, ಚಂದ್ರಹಾಸ್ ಕೊಲೆಕಾಡಿ, ಗೋಪಿನಾಥ್ ಸಾಲಿಯಾನ್, ಭೋಜ ಹೆಜಮಾಡಿ, ನಝೀರ್ ಅಹಮ್ಮದ್, ಸಂದೀಪ್ ಹಳೆಕೋಟೆ ಅವರನ್ನು ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಸಂಸ್ಥಾಪಕರಾದ ಕೆ.ಕೃಷ್ಣ ಆರ್. ಶೆಟ್ಟಿ ಮಾತನಾಡಿ, ಆಟೋರಿಕ್ಷಾ ಚಾಲಕರು ಊರಿನ ರಾಯಭಾರಿಗಳಾಗಿದ್ದು, ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಪ್ರಯಾಣಿಕರ ಕಷ್ಟ- ಸುಖಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಜೀವನ್ ಕೆ.ಶೆಟ್ಟಿ, ನಿರ್ದೇಶಕರಾದ ಅನುರಾಗ ಜೆ.ಶೆಟ್ಟಿ,ಉದ್ಯಮಿ ವಸಂತ್ ಆರ್.ಶೆಟ್ಟಿ,ಮುಲ್ಕಿ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷರಾದ ನಾಗರಾಜ ಕೊಲೆಕಾಡಿ, ಕಾರ್ಯದರ್ಶಿ ಮೋಹನ್ ಕುಬೆವೂರು ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

10/02/2021 05:06 pm

Cinque Terre

11.28 K

Cinque Terre

1