ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಸಾಮಾಜಿಕ ಧುರೀಣ ಅಳಿಯೂರು ಮಜಲೋಡಿಗುತ್ತು ಪ್ರಕಾಶ್ ಶೆಟ್ಟಿ ನಿಧನ

ಮೂಡುಬಿದಿರೆ: ಅಳಿಯೂರು ವಾಲ್ಪಾಡಿಯ ಮಜಲೋಡಿಗುತ್ತಿನ ಹಿರಿಯ ಕೃಷಿಕ, ಸಹಕಾರಿ, ಧಾರ್ಮಿಕ, ಸಾಮಾಜಿಕ ಮುಖಂಡರಾಗಿದ್ದ ಪ್ರಕಾಶ್ ಶೆಟ್ಟಿ (72) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಅಳಿಯೂರು ಆದಿನಾಥ ಬಸದಿಯ ಆಡಳಿತ ಮೊಕ್ತೇಸರರಾಗಿದ್ದ ಅವರು ನೆಲ್ಲಿಕಾರು ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದರು. ತಮ್ಮ ಹಿರಿಯರಿಂದ ನೀಡಲಾದ ನಿವೇಶನದಲ್ಲಿ ಅರಳಿದ ಅಳಿಯೂರಿನ ಹಿರಿಯ ಪ್ರಾಥಮಿಕ ಶಾಲೆಯ ಬೆಳವಣಿಗೆಯಲ್ಲಿ, ಹೈಸ್ಕೂಲಿನ ಅಭಿವೃದ್ಧಿ ಸಮಿತಿಯಲ್ಲೂ ಸಕ್ರಿಯರಾಗಿದ್ದ ಅವರು ಅಳಿಯೂರು ಗರಡಿಯ ಗೌರವಾಧ್ಯಕ್ಷರಾಗಿದ್ದರು.

Edited By : Nagaraj Tulugeri
Kshetra Samachara

Kshetra Samachara

11/01/2021 08:13 pm

Cinque Terre

3.74 K

Cinque Terre

0