ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ನಾನಾ ಕಡೆ ಚಿರತೆ ದರ್ಶನ; ಮನೆ ಬಳಿಯಿದ್ದ ಕೋಳಿ ಸ್ವಾಹ, ಪಟಾಕಿ ಶಬ್ದಕ್ಕೆ ಪರಾರಿ

ಕಡಬ: ಕಡಬ ತಾಲೂಕಿನ ಪಾಲ್ತಾಡಿ, ಬಂಬಿಲ,ಚೆನ್ನಾವರ ಪ್ರದೇಶದಲ್ಲಿ ಮತ್ತೆ ಚಿರತೆಯ ಪ್ರತ್ಯಕ್ಷ ದರ್ಶನ ಸಾರ್ವಜನಿಕರಲ್ಲಿ ಭಯಭೀತಿ ಮೂಡಿಸಿದೆ.

ಈ ಚಿರತೆ‌ಯು ಕೋಳಿಯನ್ನು ಹಿಡಿದು ತಿನ್ನುವಾಗ ಜನರು ಪಟಾಕಿ ಸಿಡಿಸಿದ್ದು,ಚಿರತೆ ಕಾಡಿನಲ್ಲಿ ಮರೆಯಾಗಿದೆ.

ಕೆಲವು ತಿಂಗಳ ಹಿಂದೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪ್ರದೇಶದಲ್ಲಿ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ಸುದ್ದಿಯಾಗಿತ್ತು.

ಬಳಿಕ ನಿನ್ನೆ ಪುತ್ತೂರು ತಾಲೂಕಿನ ಸರ್ವೆ,ಎಲಿಯ ಪ್ರದೇಶದಲ್ಲೂ ಜನರಿಗೆ ಕಾಣ ಸಿಕ್ಕಿದೆ. ಇದೀಗ ಮತ್ತೆ ಈ ಪ್ರದೇಶದಲ್ಲಿ ಚಿರತೆ ಇರವು ಕಂಡುಬಂದಿದೆ.

ಡಿ.27 ರಂದು ರಾತ್ರಿ ಚುನಾವಣೆ ಕಾರ್ಯ ಮುಗಿದ ಬಳಿಕ ಪಕ್ಷವೊಂದರ ಕಾರ್ಯಕರ್ತರು ಮನೆಗೆ ಹೋಗುವ ಸಮಯದಲ್ಲಿ ಸುಮಾರು 9.30 ರ ವೇಳೆಗೆ ಬಂಬಿಲ ನಾಡೋಳಿ ಸೇತುವೆ ಬಳಿ ಚಿರತೆ ಕಾಣಸಿಕ್ಕಿದೆ.

ಡಿ.28ರಂದು ಬೆಳಿಗ್ಗೆ ಸುಮಾರು 5.30 ರ ವೇಳೆಗೆ ಬಂಬಿಲ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ವಾಕಿಂಗ್ ‌ ಹೋಗುವವರಿಗೂ ಚಿರತೆ ದರ್ಶನ ನೀಡಿದೆ.

ಅಲ್ಲದೆ, ಡಿ.28ರಂದು ರಾತ್ರಿ ವೇಳೆ ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಬಳಿ ಚಿರತೆ ಹಲವರಿಗೆ ಗೋಚರಿಸಿದೆ. ನೆಲ್ಯಾಜೆ ವಿಶ್ವನಾಥ ರೈ ಅವರ ಮನೆಯ ಮುಂದೆ ಇದ್ದ ಕೋಳಿಯನ್ನು ಹಿಡಿದು ತಿಂದ ಚಿರತೆ, ಬಳಿಕ ಮನೆಯ ಒಳಗಿನಿಂದ ಪಟಾಕಿ ಸಿಡಿಸಿದಾಗ ಪರಾರಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಬೇಕು ಎಂಬುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/12/2020 12:27 pm

Cinque Terre

5.93 K

Cinque Terre

0