ಮಂಗಳೂರು: ಮಾದರಿ ಗ್ರಾಮ ಅಭಿಯಾನದಡಿ ಜನಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಬಾಳೆಪುಣಿ ಗ್ರಾಪಂ, ಜಿಲ್ಲಾ ಸಾಕ್ಷರತಾ ಸಮಿತಿ, ಅಪ್ನಾದೇಶ್,ಚಿತ್ತಾರ ಬಳಗ, ಪ್ರ ವೃತ್ತಿ ಕೌಶಲ್ಯ ತರಬೇತಿ ಕೇಂದ್ರ, ಸುಗ್ರಾಮ ಜಾಗೃತಿ ವೇದಿಕೆ, ಆದಿವಾಸಿ ಸಂಘ ಸಹಯೋಗದಲ್ಲಿ ನವಸಾಕ್ಷರರ ಸಂಘಟನೆಯ 29ನೇ ವರ್ಷಾಚರಣೆ `ಜಿಲ್ಲಾ ಮಟ್ಟದ ಅಕ್ಷರೋತ್ಸವ -2020, ಸ್ವೀಪ್ ಮತದಾರರ ಜಾಗೃತಿ ಮುಡಿಪುವಿನಲ್ಲಿ ನಡೆಯಿತು.
ಪುತ್ತೂರು
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಸೋಲಾರ್ ದೀಪ ಉರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನವಸಾಕ್ಷರರು ತಮ್ಮ ತಮ್ಮ ಅನುಭವ ಹಂಚಿಕೊಂಡರು.
ಉದ್ಯಮಿ ರಮೇಶ್ ಶೇಣವ, ನಾಗೇಶ್ ಕಲ್ಲೂರು, ಶಿವಪ್ರಸಾದ್ ಆಳ್ವ, ಪ್ರಾಧ್ಯಾಪಕ ಡಾ. ನವೀನ್ ಕೊಣಾಜೆ, ಒಂಬುಡ್ಸ್ ಮನ್ ರಾಮದಾಸ್ ಗೌಡ, ಚಂದ್ರಹಾಸ ಕಣಂತೂರು, ಯೋಗೀಶ್ ಪಡುಮನೆ, ಅರುಣ್ ಕುಮಾರ್ ಸುವರ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ಘನಸಂಪನ್ಮೂಲ ನಿರ್ವಹಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ತಪಸ್ಯ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
20/12/2020 09:44 am