ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕು ಸಹೃದಯರ ನೆರವಿನ ಹಸ್ತ

ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಬಜ ನಿವಾಸಿಯಾಗಿರುವ ಈ ಒಂದು ವರ್ಷದ ಮುದ್ದು ಮಗುವಿನ ಹೆಸರು ಶ್ರೀದೇವಿ, ತಂದೆ ದಿನೇಶ್ ಶೆಟ್ಟಿ. ಇವಿಂಗ್ಸ್ ಸರ್ಕೋಮಾ ಎನ್ನುವ ಎಲುಬು ಸಂಬಂಧಿ ಕ್ಯಾನ್ಸರ್ ರೋಗ ಕಂದಮ್ಮನಿಗೆ ಬಾಧಿಸಿದ್ದು, ಇತ್ತೀಚೆಗೆ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆನ್ನುವ ಸಿದ್ಧತೆಯಲ್ಲಿದ್ದ ತಂದೆ-ತಾಯಿಗೆ ಈ ವಿಚಾರ ಆಘಾತ ನೀಡಿದೆ.

ಆರಂಭದ ಹಂತದಲ್ಲಿಯೇ ರೋಗ ಪತ್ತೆಯಾಗಿರುವುದರಿಂದ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಗು ಗುಣಮುಖಳಾಗುತ್ತಾಳೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆಗೆ 40 ಲಕ್ಷ ರೂ. ಖರ್ಚಾಗುವುದಾಗಿಯೂ ತಿಳಿಸಿದ್ದಾರೆ.

ಈಗಾಗಲೇ ಈ ಪುಟ್ಟ ಮಗುವಿಗೆ ಆರಂಭಿಕ ಹಂತದ 5 ಶಸ್ತ್ರ ಚಿಕಿತ್ಸೆ ಮಾಡಿ, 4 ಕಿಮೋ ಥೆರಪಿ ನೀಡಲಾಗಿದ್ದು, 6 ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚಾಗಿದೆ. ನೆರವಿಗೆ ದಾನಿಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸಾಧ್ಯವಾದಷ್ಟು ನೆರವನ್ನು ಮಗುವಿನ ಚಿಕಿತ್ಸೆಗೆ ಒದಗಿಸುವುದಿದ್ದರೆ, ಅಕೌಂಟ್ ನಂಬರ್ ಹೀಗಿದೆ. ದಿನೇಶ್ ಶೆಟ್ಟಿ, ಅಕೌಂಟ್ ನಂಬ್ರ 42150100005115 (Bank of Baroda). IFSC CODE BARB0BANTWA ದೂರವಾಣಿ ಸಂಖ್ಯೆ: 7090883350

Edited By : Vijay Kumar
Kshetra Samachara

Kshetra Samachara

19/12/2020 09:20 pm

Cinque Terre

4.48 K

Cinque Terre

0