ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀರಕ್ಷಾ ಬೋಟ್ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ

ಮಂಗಳೂರು: ಮಂಗಳೂರಿನ ‘ಶ್ರೀರಕ್ಷಾ’ ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದಿಂದ ತಲಾ 50 ಸಾವಿರ ಪರಿಹಾಧನದ ಚೆಕ್‌ಗಳನ್ನು ನಗರದ ಸೆಂಟ್ರಲ್ ಕಮಿಟಿಯ ಸಭಾಂಗಣದಲ್ಲಿ ವಿತರಿಸಲಾಯಿತು.

ಇದೇ ವೇಳೆ ಐಒಸಿ ನಿವೃತ್ತ ಅಧಿಕಾರಿ ಮೋಹನ್ ದಾಸ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕಿಡ್ನಿ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಧನಸಹಾಯ ವಿತರಿಸಲಾಯಿತು. ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸ್ಹಾಕ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದ ಸಲಹೆಗಾರ ಪ್ರವೀಣ್ ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಬ್ದುಲ್ ಲತೀಫ್, ನಿರ್ದೇಶಕರಾದ ಯು.ಟಿ. ಅಹಮದ್ ಶರೀಫ್, ಬಿ.ಇ ಬ್ರಾಹಿಂ, ಮೊಹಮ್ಮದ್ ಅಶ್ರಫ್, ಎಂ.ಎ. ಗಫೂರ್, ಎಸ್.ಕೆ. ಇಸ್ಮಾಯಿಲ್, ಎಸ್.ಎಂ. ಇಬ್ರಾಹಿಂ, ಟಿ.ಎಚ್. ಹಮೀದ್, ಸುದತ್, ಬಿ.ಮುಹಮ್ಮದ್ ಶಾ ಅಲಿ, ಎ.ಎಂ.ಕೆ. ಮುಹಮ್ಮದ್ ಇಬ್ರಾಹಿಂ, ಬಿ.ಕೆ. ರಝಿಯಾ ಮೊದಲಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

16/12/2020 09:22 am

Cinque Terre

3.51 K

Cinque Terre

0