ಮುಲ್ಕಿ: ಸಾಹಿತ್ಯಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಜೊತೆಗೆ ಬ್ಯಾಂಕಿಂಗ್ ರಂಗದಲ್ಲಿಯೂ ಉತ್ತಮ ಸೇವೆ ನೀಡಿ, ಕಿನ್ನಿಗೋಳಿ ಹೆಸರನ್ನು ಉತ್ತುಂಗಕ್ಕೆ ಏರಿಸಿದ ಮಹಾನ್ ಸಾಧಕ ದಿ.ಕಿನ್ನಿಗೋಳಿ ಗಣೇಶ್ ಮಲ್ಯರು ಎಂದು ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಅವರು ಜ.27ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿಯ ಹಿರಿಯ ಸಾಹಿತಿ, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ದಿ. ಗಣೇಶ್ ಮಲ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಡಾ. ಪ್ರಕಾಶ್ ನಂಬಿಯಾರ್ ಮಾತನಾಡಿ, ಸರಳಸಜ್ಜನಿಕೆಯ ವ್ಯಕ್ತಿಯಾಗಿ ಮಲ್ಯರು ಬ್ಯಾಂಕ್ ಕೆಲಸದ ಜೊತೆಗೆ ಸರಸ್ವತಿಯ ಸೇವೆ ಅನನ್ಯವಾದುದು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ, ಸಾಹಿತಿ ಉದಯಕುಮಾರ್ ಹಬ್ಬು ಮಾತನಾಡಿ, ಮಲ್ಯರು ಕನ್ನಡ- ಇಂಗ್ಲಿಷ್ ಭಾಷಾ ಪಾಂಡಿತ್ಯ ಹೊಂದಿದ್ದು, ಅವರ ಹೆಸರಿನಲ್ಲಿ ಪ್ರತಿವರ್ಷ ಸಾಹಿತ್ಯದ ಕೆಲಸ ಆಗಬೇಕು ಎಂದರು. ಕಿನ್ನಿಗೋಳಿ ಜಿಎಸ್‌ಬಿ ಸಭಾ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಜೋಸ್ಸಿ ಪಿಂಟೋ, ಸಾಹಿತಿ ಡಾ.ಹರಿಶ್ಚಂದ್ರ ಸಾಲ್ಯಾನ್ , ಎಸ್. ವಿ. ಪ್ರಭು, ಸದಾನಂದ ಮಲ್ಯ, ವೈ. ಯೋಗೀಶ್ ರಾವ್, ಸಚ್ಚಿದಾನಂದ ಭಟ್, ಶತಾಮಣಿ ಮಾತನಾಡಿದರು. ಕಿನ್ನಿಗೋಳಿ ಶಾರದೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಪುರುಷೋತ್ತಮ ಶೆಟ್ಟಿ , ಯಶವಂತ ರಾವ್, ರಾಜೇಶ್ ನಾಯಕ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/01/2021 02:13 pm