ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಹತ್ರಾಸ್ ಘಟನೆಯಲ್ಲಿ ದಲಿತ ಯುವತಿಯ ಸಾವು ಉ.ಪ್ರ. ಸರಕಾರ ನಡೆಸಿದ ವ್ಯವಸ್ಥಿತ ಸಂಚಿನ ಫಲ"

ಮಂಗಳೂರು: ಹತ್ರಾಸ್‌ನಲ್ಲಿ ನಡೆದ ಹೇಯ ಕೃತ್ಯ ಖಂಡಿಸಿ ಎಸ್‌ಐಒ ಹಾಗೂ ಜಿಐಒ ಕುದ್ರೋಳಿ ಘಟಕ ವತಿಯಿಂದ ಮಂಗಳವಾರ ರಾತ್ರಿ ಧರಣಿ ನಡೆಯಿತು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷೆ ಉಮೈರಾ ಬಾನು ಮಾತನಾಡಿ, ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಬರ್ಬರ ಕೃತ್ಯ ಖಂಡಿಸಿದರು. ಘಟನೆಯ ಬಳಿಕ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡ ರೀತಿಯನ್ನು ತೀವ್ರವಾಗಿ ಖಂಡಿಸಿದ ಅವರು, ನಂತರ ನಡೆದ ಯುವತಿಯ ಸಾವು, ಸರಕಾರ ನಡೆಸಿದ ವ್ಯವಸ್ಥಿತ ಸಂಚಿನ ಫಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾರ್ಪೊರೇಟರ್ ಸಂಶುದ್ದೀನ್, ಕಾನೂನು ವಿದ್ಯಾರ್ಥಿ ನಿಹಾಲ್ ಮಹಮ್ಮದ್, ಅಮೀರ್ ಕುದ್ರೋಳಿ, ಎಸ್‌ಐಒ, ಜಿಐಒ ಹಾಗೂ ಜೆಐಎಚ್ ಮಹಿಳಾ ವಿಭಾಗದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Edited By : Vijay Kumar
Kshetra Samachara

Kshetra Samachara

07/10/2020 10:26 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ