ಮೂಡುಬಿದಿರೆ: ಇಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಯಿತು.
ನಂತರ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ಮಾಧ್ಯಮದವರಿಗೆ ಮಾಹಿತಿ ನೀಡಿ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ೮ ದೂರುಗಳು ಸಾರ್ವಜನಿಕರಿಂದ ಬಂದಿದ್ದು, ಆರ್ ಟಿಸಿ ಸಂಬಂಧಪಟ್ಟಂತೆ ಒಂದು ಪ್ರಕರಣವನ್ನು ಮಂಗಳವಾರ ಇತ್ಯರ್ಥ ಮಾಡಲಾಗಿದೆ. ಮೂರು ದೂರುಗಳಿಗೆ ಸೂಕ್ತ ನಮೂನೆ `ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಲಾಗಿದೆ, ಕಂದಾಯ ಇಲಾಖೆಗೆ ಸಂಬಂಧ ಪುಟ್ಟ ಕರ್ತವ್ಯ ನಿರ್ಲಕ್ಷದ ದೂರುಗಳು ಸಾರ್ವಜನಿಕರಿಂದ ಬಂದಿದೆ ಎಂದು ಹೇಳಿದರು. ಲೋಕಾಯುಕ್ತ ಕಾನ್ಸಸ್ಟೇಬಲ್ ಸುರೇಂದ್ರ ಈ ಸಂದರ್ಭದಲ್ಲಿದ್ದರು.
Kshetra Samachara
27/09/2022 10:56 pm