ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಕ್ಷಾ ದರ ಹಾಗೂ ಎಲೆಕ್ಟ್ರಿಕ್ ವಾಹನಕ್ಕೆ ಪರ್ಮಿಟ್ ನಿಗದಿ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನಾದ್ಯಂತ ಸಂಚರಿಸುವ ರಿಕ್ಷಾ ಪ್ರಯಾಣದ ಕನಿಷ್ಠ ದರ 1.5 ಕಿಲೋ ಮೀಟರ್ ಗೆ ರೂ.45, ಹೆಚ್ಚುವರಿ ಪ್ರತಿ ಕಿಲೋ ಮೀಟರ್ ಗೆ ರೂ 25ಕ್ಕೆ ಹೆಚ್ಚುವಂತೆ ಮತ್ತು ಎಲೆಕ್ಟ್ರಿಕ್ ವಾಹನಕ್ಕೆ ಪರ್ಮಿಟ್ ನಿಗದಿ ಮಾಡುವಂತೆ ಆಗ್ರಹಿಸಿ ಮೂಡುಬಿದಿರೆ ಆಟೋ ರಿಕ್ಷಾ ಚಾಲಕರ ಸಂಘವು ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಮೂಲಕ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 10 ವರ್ಷದ ಹಿಂದೆ ರಿಕ್ಷಾ ಪ್ರಯಾಣದ ಕನಿಷ್ಠ ದರ ಮತ್ತು ಹೆಚ್ಚುವರಿ ಪ್ರತಿ ಕಿಲೋ ಮೀಟರ್ ಗೆ ದರವನ್ನು ನಿಗದಿ ಪಡಿಸಿದ್ದು, ಪ್ರಸ್ತುತ ಡೀಸೆಲ್, ಪೆಟ್ರೋಲ್ ಮತ್ತು ಎಲ್.ಪಿ.ಜಿ. ದರ ದುಪ್ಪಟ್ಟಾಗಿದೆ. ಕೆ.ಎಸ್.ಆರ್ .ಟಿ.ಸಿ ದರ 10 ವರ್ಷದಲ್ಲಿ 8 ಬಾರಿ ಹೆಚ್ಚಿಸಿದೆ. ರಿಕ್ಷಾ ಚಾಲಕ- ಮಾಲಕರಿಗೆ ಖರ್ಚುಗಳು ಹೆಚ್ಚಾಗಿದೆಯೇ ಹೊರತು ನಯಾಪೈಸೆ ಲಾಭ ದೊರೆಯುತ್ತಿಲ್ಲ.

ರಿಕ್ಷಾದ ಇನ್ಸುರೆನ್ಸ್ ದರಗಳು ಮೂರು ಪಟ್ಟು ಏರಿಕೆಯಾಗಿದೆ. ಬಿಡಿ ಭಾಗಗಳ ಬೆಲೆಗಳು ಹಾಗೂ ಪರ್ಮಿಟ್ ರಿನಿವಲ್ ದರವೂ ಕೂಡಾ ದುಪ್ಪಟ್ಟಾಗಿರುತ್ತದೆ. ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗೆ ಒಂದೇ ಆಟೋ ದರವನ್ನು ನಿಗದಿ ಪಡಿಸಬೇಕು.

ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದು , ಹಲವಾರು ವರ್ಷಗಳಿಂದ ನಗರ ಪರವಾನಿಗೆಯನ್ನು ಹೊಂದಿ ನಿಯತ್ತಿನಿಂದ ದುಡಿಯುವವರಿಗೆ ಈ ನಿಯಮದಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಎಲೆಕ್ಟ್ರಿಕ್ ವಾಹನಕ್ಕೆ ಪರವಾನಿಗೆಯ ನಿಯಮವನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಉಪತಹಶೀಲ್ದಾರ್ ರಾದ ಕೆ.ರಾಮ ಮತ್ತು ತಿಲಕ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

ಆಟೋ ಚಾಲಕ-ಮಾಲಕರ ಸಂಘ (ರಿ)ದ ಅಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ಸಂತೋಷ್ ಆರ್ .ಶೆಟ್ಟಿ ಮತ್ತು ಸದಸ್ಯರು ಈ ಸಂದರ್ಭದಲ್ಲಿದ್ದರು.

Edited By : PublicNext Desk
Kshetra Samachara

Kshetra Samachara

21/09/2022 05:10 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ