ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: 'ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ'

ಉಳ್ಳಾಲ: ಅಭಿವೃದ್ಧಿ ಕಾಮಗಾರಿಗಳ ಗುಣ ಮಟ್ಟತೆಯಲ್ಲಿ ಯಾವುದೇ ರಾಜಿ ಇಲ್ಲ.ಗುಣ ಮಟ್ಟ ಕಳಪೆಯಾದರೆ ಗುತ್ತಿಗೆದಾರರಿಗೆ ಖಂಡಿತ ಬಿಲ್‌ ಸಿಗೋದಿಲ್ಲ ಎಂದು ಶಾಸಕ ಯು.ಟಿ ಖಾದರ್ ಎಚ್ಚರಿಸಿದ್ದಾರೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಅಳೇಕಳ ಮಸೀದಿ‌ಯ ಬಳಿ ನಿರ್ಮಾಣಗೊಳ್ಳಲಿರುವ ಚರಂಡಿ ,ಹಳೆಕೋಟೆ ಅಡ್ಡ ರಸ್ತೆ ಮತ್ತು ಉಳ್ಳಾಲ ಬೈಲ್ -ಅನಿಲ ಕಂಪೌಂಡ್ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಅವರು ಶಿಲಾನ್ಯಾಸಗೈದು ಮಾತನಾಡಿದರು.

ಉಳ್ಳಾಲ ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮೀಸಲಿರಿಸಲಾಗಿತ್ತು.ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡ ಮೇಲೆ ಅದನ್ನ ಸಂಪೂರ್ಣಗೊಳಿಸುವುದೇ ನನ್ನ ಉದ್ದೇಶ ಎಂದರು.

ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್,ಉಪಾಧ್ಯಕ್ಷ ಆಯುಬ್ ಮಂಚಿಲ,ಪೌರಾಯುಕ್ತರಾದ ವಿದ್ಯಾ ಕಾಳೆ ಮೊದಲಾದವರು ಇದ್ದರು.

Edited By : PublicNext Desk
Kshetra Samachara

Kshetra Samachara

18/09/2022 04:06 pm

Cinque Terre

606

Cinque Terre

0

ಸಂಬಂಧಿತ ಸುದ್ದಿ