ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ

ಮೂಡುಬಿದಿರೆ: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.

ಶಾಸಕ ಉಮಾನಾಥ ಎ.ಕೋಟ್ಯಾನ್‌ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ನಂತರ ಮಾತ ನಾಡಿ ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತ ವಿಶ್ವಕರ್ಮ. ಕಲ್ಲಿನ, ಮರದ ಶಿಲ್ಪಕಲೆಗಳಿಗೆ ಮೂಲ ವಿಶ್ವಕರ್ಮ ಸಮುದಾಯದವರು. ಹಿಂದೆ ಬಂಗಾರದ ಕೆಲಸ ಮಾಡುವವರೆಂದರೆ ವಿಶ್ವಕರ್ಮರು ಆದರೆ ಇಂದು ಬೇರೆ ಬೇರೆ ಜನಾಂಗದವರು ಅದನ್ನು ತಿಳಿದು ಬಂಗಾರ ಸಹಿತ ಶಿಲ್ಪಕಲೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಗತ್ತಿನ ಸೃಷ್ಟಿಕರ್ತನ ಜಯಂತಿಯನ್ನು ಎಲ್ಲರು ಸೇರಿ ಆಚರಿಸಬೇಕಾಗಿದೆ ಎಂದು ಹೇಳಿದರು.

ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಸಂಸ್ಥಾನದ ಕಾಳ ಹಸ್ತೇಂದ್ರ ಸ್ವಾಮೀಜಿಯ ಆಪ್ತ ಸಹಾಯಕ ಲೋಲಾಕ್ಷ ಶರ್ಮ ವಿಶ್ವಕರ್ಮ ಜಯಂತಿಯ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಕಾಳಕಾಂಬ ದೇವಸ್ಥಾನದ ಆಡಳಿತ ಮೋಕ್ತೇಸರ ಜಯಕರ ಪುರೋಹಿತ್, ದೇವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ, ಉಪ ತಹಶೀಲ್ದಾರ್ ರಾಮ ಕೆ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಕ್ಷೇತ್ರ ಶಿಕ್ಷಣಾಧಿ ಕಾರಿ ಗಣೇಶ್ ಹಾಗೂ ಬೆಳುವಾಯಿ ಗ್ರಾ.ಪಂ.ನ ವಾಜ ಅಧ್ಯಕ್ಷ ಭಾಸ್ಕರ ಆಚಾರ್ಯ ಉ ಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/09/2022 08:23 pm

Cinque Terre

1.9 K

Cinque Terre

0

ಸಂಬಂಧಿತ ಸುದ್ದಿ