ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲ್ ಸಾರ್ ನ ಬಳಿಯ ನದಿಯ ನೀರಿನಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹವಾಗಿದ್ದ ಕಸವು ಸಮೀಪದ ಅಣೆಕಟ್ಟು ಬಳಿ ಸಂಗ್ರಹವಾಗಿದ್ದರಿಂದ ಕತ್ತಲ್ ಸಾರ್ ನ ಗ್ರಾಮಸ್ಥರು ಹಾಗೂ ಕೃಷಿಕರು ಆಕ್ರೋಶಗೊಂಡಿದ್ದಾರೆ.
ಅಲ್ಲದೆ ನದಿಗೆ ಕಸ ಎಸೆದವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಕತ್ತಲ್ ಸಾರ್ ನ ನದಿಯ ಸುತ್ತಮುತ್ತ ಹೆಚ್ಚು ಕೃಷಿ ಭೂಮಿಗಳಿದ್ದು,ನದಿಯಲ್ಲಿನ ಕಸದ ರಾಶಿಯಿಂದಾಗಿ ಕೃಷಿಕರು ಆತಂಕ ಗೊಂಡಿದ್ದಾರೆ.ಯಾರೂ ವಾಹನಗಳಲ್ಲಿ ಬಂದು ನದಿಯ ಸಮೀಪ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ .ಈ ಬಗ್ಗೆ ಸಂಬಂಧಪಟ್ಟ ಪಡುಪೆರಾರ ಗ್ರಾಮ ಪಂಚಾಯತ್ ನದಿಯಲ್ಲಿ ಕಸ ಎಸೆದು ಹೋದವರ ವಿರುದ್ದ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
12/09/2022 10:06 pm