ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ್ಞಾನದ ಪ್ರಸರಣವು ಸದಾ ಚಾಲ್ತಿಯಲ್ಲಿರಬೇಕೆ ಹೊರತು ಜಡತ್ವವನ್ನು ಹೊಂದಬಾರದು : ಕೆ ಸತ್ಯಲಕ್ಷ್ಮಿ

ಮೂಡುಬಿದಿರೆ: ಆಳ್ವಾಸ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಭಾರತ ಸರಕಾರದ ಆಯುಷ್ ಇಲಾಖೆಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಪ್ರಾಯೋಜಕತ್ವದಲ್ಲಿ 6 ದಿನಗಳ ನಿರಂತರ ವೈದ್ಯಕೀಯ ಶಿಕ್ಷಣ ಕಾರ‍್ಯಗಾರ ಸೋಮವಾರ ಕಾಲೇಜಿನ ಆವರಣದಲ್ಲಿ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ ಸರಕಾರದ ರಾಷ್ಟ್ರಿಯ ನ್ಯಾಚುರೋಪತಿ ಸಂಸ್ಥೆಯ ನಿರ್ದೇಶಕಿ ಡಾ. ಕೆ ಸತ್ಯಲಕ್ಷ್ಮಿ ಮಾತನಾಡಿ ವಿವಿಧ ರಾಜ್ಯಗಳಿಂದ ಬಂದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಪರಸ್ಪರ ಚರ್ಚಸಿಬಹುದಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಯನ್ನು ತರಲು ಸಹಕರಿಸುತ್ತದೆ ಎಂದರು. ಜ್ಞಾನದ ಪ್ರಸರಣವು ಸದಾ ಚಾಲ್ತಿಯಲ್ಲಿರಬೇಕೆ ಹೊರತು ಜಡತ್ವವನ್ನು ಹೊಂದಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ, ನಿಖರವಾದ ಸಂಶೋಧನೆಯಿಂದ ಮಾತ್ರ ಬದಲಾವಣೆ ಸಾಧ್ಯ. ಉತ್ತಮವಾದದ್ದನ್ನು ನಿರೀಕ್ಷಿಸುವ ಮೊದಲು ಸತ್ಕರ‍್ಯದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ದೇಶದ ಭವಿಷ್ಯವನ್ನು ರೂಪಿಸಲು ಜನರು ಸಾಮೂಹಿಕವಾಗಿ ಕೆಲಸ ಮಾಡುವುದು ಒಳಿತು ಎಂದರು.

ಕಾರ್ಯಕ್ರಮದಲ್ಲಿ ಎಸ್ ವ್ಯಾಸ ವಿವಿಯ ನೇಚುರೋಪತಿ ಕಾಲೇಜಿನ ಪ್ರಾಚರ‍್ಯ ಡಾ.ಅಪಾರ ಎ ಸಾವೋಜಿ, ಮೈಸೂರಿನ ಸೀನಿಯರ್ ಫಿಜಿಶಿಯನ್ ಡಾ ಹರಿ ಗಣೀಶ್ ,ಪ್ರೊ. ಗೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಥಮ ವರ್ಷದ ನ್ಯಾಚುರೋಪತಿ ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ನ ಪ್ರಾಂಶುಪಾಲೆ ಡಾ ವನಿತಾ ಶೆಟ್ಟಿ ಸ್ವಾಗತಿಸಿದರು. ಪ್ರೊ. ಡಾ ನಿತೇಶ್ ಗೌಡ ವಂದಿಸಿದರು.

Edited By : PublicNext Desk
Kshetra Samachara

Kshetra Samachara

12/09/2022 08:32 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ