ಮೂಡುಬಿದಿರೆ : ದ.ಕ. ಜಿಲ್ಲೆ ಪದವಿ ಪೂರ್ವ ಇಲಾಖೆ ಮತ್ತು ಮೂಡುಬಿದಿರೆಯ ರೋಟರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ 2022-23ರ ಸಾಲಿನ ಮೂಡುಬಿದಿರೆ ತಾಲೂಕು ಮಟ್ಟದ ಪ.ಪೂ ಕಾಲೇಜಿನ ಬಾಲಕರು, ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ರೋಟರಿ ಎಜುಕೇಶನ್ ಸೊಸೈಟ ಅಧ್ಯಕ್ಷ ನಾರಾಯಣ ಪಿ.ಎಂ. ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆಗೆ ಸಹಕಾರಿಯಾಗಿದ್ದು ಮಕ್ಕಳು ಶಿಕ್ಷಣದೊಂದಿ ಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು. ಮುಖ್ಯಅತಿಥಿ, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಆರೀಫ್ ಅವರು ಮಾತನಾಡಿ, ದೈಹಿಕ ಕ್ಷಮತೆ, ಮಾನಸಿಕ ಸ್ಥಿರತೆ, ನೆಮ್ಮದಿಗೆ ಕ್ರೀಡೆ ಬೇಕಾಗಿರುವಷ್ಟೇ ಪ್ರಮುಖವಾಗಿ ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಎಲ್ಲರೂ ಮನಸು ಮಾಡಬೇಕು ಎಂದರು.
ಮೂಡುಬಿದಿರೆ ತಾಲೂಕು ಕ್ರೀಡಾ ಸಂಚಾಲಕ ನವೀನ್ ಹೆಗ್ಡೆ ಅವರು ರೋಟರಿ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದು ಶಿಕ್ಷಣದೊಂದಿಗೆ ಕ್ರೀಡೆಗೂ ಆದ್ಯತೆ, ಪ್ರೋತ್ಸಾಹ ನೀಡುತ್ತಿದ್ದ ಮಾಜಿ ಸಚಿವ ದಿ: ಕೆ. ಅಮರನಾಥ ಶೆಟ್ಟಿ, ರೋಟರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ದಿ: ಪ್ರಕಾಶ್ ಹೆಗ್ಡೆ ಅವರು ಕ್ರೀಡಾ ಚಟುವಟಕೆಗಳಲ್ಲಿ ಸಕ್ರಿಯರಾಗಿದ್ದುದನ್ನು ಸ್ಮರಿಸಿ, ರೋಟರಿ ಶಿಕ್ಷಣ ಸಂಸ್ಥೆ ವ್ಯವಸ್ಥಿತವಾಗಿ ಕ್ರೀಡಾಕೂಟಗಳನ್ನು ನಡೆಸುತ್ತ ಬಂದಿದ್ದು ಈ ಪಂದ್ಯಾಟವೂ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಸಂಚಾಲಕ ಎಚ್. ಮೋಹನ ಭಟ್, ರೋಟರಿ ಕೇಂದ್ರೀಯ ಶಾಲೆಯ ಪ್ರಾಚಾರ್ಯ ರೂಪಾ ಮಸ್ಕರೇನಸ್,ರೋ.ಆ.ವಾ.ಶಾಲೆಯ ಮುಖ್ಯಶಿಕ್ಷಕಿ ತಿಲಕಾ ಅ ನಂತವೀರ ಜೈನ್, ರೋಟರಿ ಪ.ಪೂ.ಕಾ, ಮತ್ತು ಕೇಂದ್ರೀಯ ಶಾಲೆಯ ಆಡಳತಾಧಿಕಾರಿ ಪ್ರಫುಲ್ ಪ್ರಿನ್‌ಸ್ಟನ್ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಪ ಪೂ.ಕಾಲೇಜನ ಉಪಪ್ರಾಚಾರ್ಯ ರವಿಕುಮಾರ್,ದೈ.ಶಿ. ನಿರ್ದೇಶಕ ಶಹನ್‌ರಾಜ್ ಜೈ ನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಬಾಕೀ, ಕ್ರೀಡಾಕಾರ್ಯದರ್ಶಿ ರಕ್ಷಿತಾ ಬಂಗೇರ ಉಪಸ್ಥಿತರಿದ್ದರು.
Kshetra Samachara
10/09/2022 07:40 pm