ಮೂಡುಬಿದಿರೆ: ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆದ ಸಂಜೀವಿನಿ ಮಾಸಿಕ ಸಂತೆಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಮಹಿಳೆ ಸ್ವಂತ ವ್ಯಾಪಾರ-ವಹಿವಾಟುಗಳನ್ನು ಮಾಡಲು ಶಕ್ತಿಯನ್ನು ತುಂಬುವಂತಹ ಕೇಂದ್ರ ಸರಕಾರದ ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ.
ಮೊದಲು ಸಣ್ಣ ಉದ್ಯಮಗಳನ್ನು ಆರಂಭಿಸಿ ಜನರು ಇಂದು ಉನ್ನತ ಮಟ್ಟದ ಉದ್ಯಮಿಗಳಾಗಿ ಬೆಳೆದ ಉದಾಹರಣೆಗಳಿದೆ. ಸಣ್ಣ ಉದ್ಯಮದಿಂದಲೇ ದೊಡ್ಡ ಉದ್ಯಮಿಯಾಗಲು ಸಾಧ್ಯ. ಯೋಜನೆಯ ಪ್ರಯೋಜನವನ್ನು ಪಡೆದು ಉತ್ತಮ ಲಾಭ ಪಡೆದು ಸ್ವಾವಲಂಬಿಗಳಾಗಿ ಎಂದರು. ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಶಶಿಧರ್ ಎಂ.,ದರೆಗುಡ್ಡೆ ಪಿಡಿಒ ರಮೇಶ್ ರಾಥೋಡ್, ಮಂಗಳೂರು ಎನ್.ಆರ್.ಎಲ್.ಎಮ್‌ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ನೆಲ್ಲಿಕಾರು ಪಿಡಿಒ ಪ್ರಶಾಂತ್ ಶೆಟ್ಟಿ, ತಾಲೂಕು ಐ.ಇ.ಸಿ ಸಂಯೋಜಕಿ ಅನ್ವಯ, ವಾಲ್ಪಾಡಿ ಪಂಚಾಯತ್ ಅಧ್ಯಕ್ಷ ಪ್ರದೀಪ್, ನೆಲ್ಲಿಕಾರು ಭ್ರಾಮರಿ ಸಂಜೀವಿನಿ ಗ್ರಾಪಂ ಒಕ್ಕೂಟದ ಅಧ್ಯಕ್ಷೆ ರಿಹಾನಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/08/2022 11:27 pm