ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಳ್ವಾಸ್ ಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ

ಮೂಡುಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 3ಮಂದಿ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಕೊಡಮಾಡಲ್ಪಡುವ 2020ನೇ ಸಾಲಿನ “ಕರ್ನಾಟಕ ಕ್ರೀಡಾರತ್ನ”ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಕಿರಣ್‌ಕುಮಾರ್, ಕುಸ್ತಿಯಲ್ಲಿ

ಲಕ್ಷ್ಮೀರೇಡೇಕರ್ ಹಾಗೂ ಖೋಖೋ ದಲ್ಲಿ ದೀಕ್ಷಾ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳು.

ಕಿರಣ್‌ಕುಮಾರ್ ಪ್ರಸಕ್ತ ಕರ್ನಾಟಕ ರಾಜ್ಯ ತಂಡದ ನಾಯಕರಾಗಿರುವ ಕಿರಣ್ ಒಟ್ಟು _16 ಬಾರಿ ರಾಜ್ಯ ತಂಡವನ್ನು ರಾಷ್ಟ್ರೀಯ

ಸೀನಿಯರ್ ಹಾಗೂ ಫೆಡರೇಶನ್‌ಕಪ್ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ್ದು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಟ್ಟು ೪ ಬಾರಿಚಿನ್ನ, ೪ ಬಾರಿ ಬೆಳ್ಳಿ ಹಾಗೂ ೮ ಬಾರಿ ಕಂಚಿನ ಪದಕ ಪಡೆದಿರುವರು. ಅಖಿಲ ಭಾರತ ಅಂತರ್ ವಿ.ವಿ ಕೂಟದ ಚಾಂಪಿಯನ್ ತಂಡದ ನಾಯಕರಾಗಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದು, ೪ ಬಾರಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದಾರೆ.

ಲಕ್ಷ್ಮೀರೇಡೇಕರ್ ಒಟ್ಟು 5ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಇವರು ರಾಷ್ಟ್ರೀಯ ಜೂನಿಯರ್ ಕೂಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. 2 ಬಾರಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಹಾಗೂ 1 ಬಾರಿ ಖೇಲೋ ಇಂಡಿಯಾ ಕೂಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. 2018ರಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ನಿಮಿತ್ತ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು. 3 ಬಾರಿ ಅಖಿಲ ಭಾರತ ಅಂತರ್ ವಿವಿ ಕುಸ್ತಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದರು.

ದೀಕ್ಷಾ ಒಟ್ಟು 8 ಬಾರಿ ರಾಷ್ಟ್ರೀಯ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಇವರು 4 ಬಾರಿ ಬೆಳ್ಳಿ ಹಾಗೂ 4 ಬಾರಿ ಕಂಚಿನ ಪದಕವನ್ನು ಪಡೆದಿರುತ್ತಾರೆ. 4 ಬಾರಿ ಅಖಿಲ ಭಾರತ ಅಂತರ್ ವಿ.ವಿ ಕೂಟಗಳಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದು 1 ಬಾರಿ ಚಿನ್ನ ಹಾಗೂ 1 ಬಾರಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನಿತ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಪ್ರಶಸ್ತಿ ಪುರಸ್ಕೃತ 3 ಮಂದಿ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಚಿತ ಶಿಕ್ಷಣದ ವಿದ್ಯಾರ್ಥಿಗಳಾಗಿದ್ದಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

29/08/2022 04:48 pm

Cinque Terre

738

Cinque Terre

0

ಸಂಬಂಧಿತ ಸುದ್ದಿ