ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವಾಸಿಗರಿಗೆ ಮೂಲಭೂತ ಸೌಕರ್ಯ, ಸುರಕ್ಷತಾ ವ್ಯವಸ್ಥೆಗೆ ಅಗತ್ಯ ಕ್ರಮ - ಶಾಸಕ ಡಾ .ಭರತ್ ಶೆಟ್ಟಿ

ಬೈಕಂಪಾಡಿ:ಪ್ರವಾಸಿಗರ ಅನುಕೂಲಕ್ಕಾಗಿ 1 ಕೋಟಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ ಪಣಂಬೂರು 11 ನೇ ವಾರ್ಡಿನ ತಣ್ಣೀರುಬಾವಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಕೃತಿ ವಿಕೋಪದಿಂದ ಹಾಳಾದ ರಸ್ತೆಯ ಭಾಗಗಳು ಕೂಡ ಇದೇ ಪ್ಯಾಕೇಜಿನಲ್ಲಿ ಒಳಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಪಿಪಿಪಿ ಮಾದರಿಯಲ್ಲಿ ಬೀಚ್ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಹೇಳಿದರು.

ಅವರು 85 ಲಕ್ಷ ರೂಪಾಯಿ ವೆಚ್ಚದಲ್ಲಿ ತಣ್ಣೀರುಬಾವಿ ರಸ್ತೆಯ ಕಾಂಕ್ರೀಟಿಕರಣ ಮತ್ತು ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಭವಿಷ್ಯದಲ್ಲಿ ಬ್ಲೂಫ್ಲೇಗ್ ಬೀಚ್ ಆಗುವ ಹಂತದಲ್ಲಿ 8 ಕೋಟಿ ರೂಪಾಯಿ ಅನುದಾನದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ, ಸುರಕ್ಷತಾ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಸುನೀತಾ ಸಾಲಿಯಾನ್, ಮಾಜಿ ಕಾರ್ಪೋರೇಟರ್ ರಘುವೀರ್ ಪಣಂಬೂರು, ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/08/2022 09:19 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ