ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಠಿ ಕ್ಲಬ್ ವತಿಯಿಂದ 'ವನ್ಯ ಜೀವಿ ಚಲನಚಿತ್ರ ನಿರ್ಮಾಣ ಕಲೆ ಮತ್ತು ವಿಜ್ಞಾನ' ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವನ್ಯಜೀವಿ ಫಿಲ್ಮ್ ಮೇಕರ್ ಪ್ರಕಾಶ್ ಮತಾದ ಮಾತನಾಡಿ, ವನ್ಯ ಜೀವಿಗಳಿಗೆ ನಾವು ಗೌರವ ನೀಡಿದರೆ ಅವುಗಳು ನಮಗೆ ಗೌರವ ನೀಡುತ್ತವೆ. ವನ್ಯ ಜೀವಿಗಳ ಛಾಯಾಗ್ರಹಣ ಮಾಡುವಾಗ ತಾಳ್ಮೆಯು ಬಹು ಮುಖ್ಯವಾಗಿರುತ್ತದೆ. ಎಂದರು. ಈ ಸಂದರ್ಭ ಅವರು ತೆಗೆದ ಛಾಯಾಚಿತ್ರಗಳನ್ನು, ವೀಡಿಯೋಗಳನ್ನು ಪ್ರದರ್ಶಿಸಿ ತಮಗಾದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಕೃತಿ ಜೊತೆಗೆ ಹೇಗೆ ವ್ಯವಹರಿಸುತ್ತೇವೆ ಹಾಗೂ ಪ್ರಕೃತಿಯನ್ನು ಎಷ್ಟು ಕಾಳಜಿಯಿಂದ ಕಾಪಾಡುತ್ತೇವೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಹಿನ್ನೆಲೆಯಲ್ಲಿ ಸೃಷ್ಠಿ ಕ್ಲಬ್ ಆರಂಭಿಸಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರಕೃತಿ ಬಗೆಗಿರುವ ಕಾಳಜಿಯನ್ನು ವಿವಿಧ ಚಟುವಟಿಕೆಗಳ ಮುಖಾಂತರ ಮಾಡಲಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿ ಚೈತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು.
Kshetra Samachara
21/08/2022 11:02 am