ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಂಕಜ್ ಭಟ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಪಂಕಜ್ ಭಟ್ ಇದಕ್ಕೂ ಮೊದಲು ಓರಿಸ್ಸಾದ ಭುವನೇಶ್ವರದಲ್ಲಿ ನಡೆದ 2022 ರ ರಾಷ್ಟ್ರಮಟ್ಟದ 32 ನೇ ಸಾಲಿನ 17 ವರ್ಷ ಒಳಗಿನ ವಯೋಮಿತಿಯ ಮುಕ್ತ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ರಾಷ್ಟ್ರಕ್ಕೆ 16 ನೇ ಸ್ಥಾನ ಪಡೆದಿದ್ದರು. ಪಂಕಜ್ ಭಟ್‌ನ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕ ಮತ್ತು ಬೋಧಕೇತರ ವೃಂದದವರು ತಂಡದ ವ್ಯವಸ್ಥಾಪಕರಾದ ಮಹೇಶ್ ಶೆಣೈ ಅಭಿನಂದನೆ ಸಲ್ಲಿಸಿದ್ದಾರೆ. ಪಂಕಜ್ ಭಟ್ ಪುತ್ತೂರಿನ ವೈದ್ಯರಾದ ಡಾ. ಮಹಾಲಿಂಗೇಶ್ವರ ಪ್ರಸಾದ್ ಭಟ್ ಮತ್ತು ಪಾವನ ಪ್ರಸಾದ್ ರವರ ಸುಪುತ್ರ.
Kshetra Samachara
21/08/2022 10:12 am