ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮುಂಡ್ಕೂರಿನಲ್ಲಿ ಶ್ರಾವಣ ಸಂಭ್ರಮ

ಮೂಡುಬಿದಿರೆ: ಹಬ್ಬಗಳ ಸಾಲು ಆರಂಭವಾಗುವುದೇ ಶ್ರಾವಣದಿಂದ. ಶ್ರಾವಣವು ಮಹಿಳೆಯರಿಗೆ ವಿಶೇಷ ಮಾಸವಾಗಿದೆ. ಸಮೃದ್ಧ ಮಳೆಯಾಗುತ್ತಿರುವುದರಿಂದ ಔಷಧೀಯ ಗುಣವುಳ್ಳ ಗಿಡಗಳು ಹುಲುಸಾಗಿ ಬೆಳೆಯುತ್ತಿವೆ. ಇದನ್ನೂ ಆಹಾರವಾಗಿ ಸೇವಿಸುವುದರಿಂದ ಆರೋಗ್ಯಪೂರ್ಣವಾಗಿ ಬದುಕಲು ಸಹಕಾರಿಯಾಗಲಿದೆ ಎಂದು ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ ಬೈಕಾಡಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷೆ ಶಾಂತಾಲಾ ಎಸ್ ಆಚಾರ್ಯ,

ಸಂಘದ ಗೌರವ ಸಲಹೆಗಾರ ಪ್ರಸಾದ್ ಪುರೋಹಿತ್, ವಿಶ್ವಕರ್ಮ ಸುಧಾರಕ ಸಂಘ ಇನ್ನ-ಮುಂಡ್ಕೂರು-ಮುಲ್ಲಡ್ಕ ಇದರ ಅಧ್ಯಕ್ಷ ಅಶೋಕ್ ಆಚಾರ್ಯ, ಮುಂಡ್ಕೂರು ವಿಶ್ವಕರ್ಮ ಸಂಘದ ಅಧ್ಯಕ್ಷ ಯಶವಂತ್ ಆಚಾರ್ಯ, ಶಾಂಭವಿ ಮಹಿಳಾ ಮಂಡಳಿ ಅಧ್ಯಕ್ಷೆ ಮಲ್ಲಿಕಾ ಪ್ರಭಾಕರ್, ಗೌರವಾಧ್ಯಕ್ಷ ದಿನೇಶ್ ಆಚಾರ್ಯ ಅರದಾಲು, ಯುವ ಬಳಗದ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಜ್ಯೋತಿ ಸಂತೋಷ್ ಆಚಾರ್ಯ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಐದು ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದ.ಕ.ಜಿಲ್ಲಾ ಚಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು, ಸವಿತಾ ದಿನೇಶ್ ವಂದಿಸಿದರು, ಕೃತಿ ಸದಾನಂದ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

18/08/2022 04:38 pm

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ