ಮೂಡುಬಿದಿರೆ: ಇಲ್ಲಿನ ಬ್ಲಾಸಮ್ ಅನುದಾನ ರಹಿತ ಶಾಲೆ ಬೆಳುವಾಯಿ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯನ್ನು ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷ ಸುಭಾಷ್ ಚಂದ್ರ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಸೈಮನ್ ಮಸ್ಕರೇನಸ್ ವಹಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ್ ಬಿ ರಾಜಶ್ರೀ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸೂರಜ್ ಆಳ್ವ ಅಂತರಾಷ್ಟ್ರೀಯ ಯೋಗ ತೀರ್ಪುಗಾರ ನರೇಂದ್ರ ಕಾಮತ್ ಸಿ ಆರ್ ಪಿ ಪ್ರಸನ್ನ ವಿ ಶೆಣೈ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುನಿಲ್ ಮಿರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು ದೈಹಿಕ ಶಿಕ್ಷಕಿ ಜಯಕುಮಾರಿ ಸ್ವಾಗತಿಸಿ ಶಿಕ್ಷಕಿ ರಾಹಿಲಾ ಬಾನು ವಂದಿಸಿದರು ಶ್ವೇತ ಕಾರ್ಯಕ್ರಮ ನಿರೂಪಿಸಿದರು ಸಮಾರೋಪ ಸಮಾರಂಭದಲ್ಲಿ ಯೋಗ ತೀರ್ಪುಗಾರರಾದ ಅಶೋಕ್ ಕುಮಾರ್, ಪ್ರಫುಲ್ಲ ಎಂ ಶೆಟ್ಟಿ, ಶಂಕರ ನಾಯಕ್, ಬಾಲಕೃಷ್ಣ ರೆಕ್ಯ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/08/2022 03:28 pm