ಕಾವೂರು:ಮಂಗಳೂರು ನಗರ ಉತ್ತರ ಕ್ಷೇತ್ರದ ವಾರ್ಡ್18 ಕಾವೂರು ವ್ಯಾಪ್ತಿಯಲ್ಲಿ ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ ಕಿಂಗ್ಸ್ ಪಾರ್ಕ್ ಅಭಿವೃದ್ಧಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ 8.50 ಲಕ್ಷದ ಅಭಿವೃದ್ಧಿ ಕಾರ್ಯಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಂದು ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್,ಮಂಡಲ ಕಾರ್ಯದರ್ಶಿ ಸುಚೇತನ್ ,ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ,ಜಿಲ್ಲಾ ಯುವ ಮೋರ್ಚಾ ಖಜಾಂಜಿ ರಕ್ಷಿತ್ ಪೂಜಾರಿ,ಮಂಡಲ ಪ್ರಕೋಷ್ಠದ ಸಹಸಂಚಾಲಕ ಅಶ್ವಿನ್ ಅಮೀನ್, ಬೂತ್ ಅಧ್ಯಕ್ಷ ಜಯರಾಮ್ ಕೋಟ್ಯಾನ್, ಸ್ಥಳೀಯ ಕಿಂಗ್ಸ್ ಪಾರ್ಕ್ ನಿವಾಸಿಗಳು,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
17/08/2022 04:04 pm