ಬಜಪೆ ಪಟ್ಟಣ ಪಂಚಾಯತ್ ವತಿಯಿಂದ ನಡೆದ 'ಹರ್ ಘರ್ ತಿರಂಗ' ಧ್ವಜ ವಿತರಣೆಗೆ ಇಲ್ಲಿನ ಸಮುದಾಯ ಭವನದಲ್ಲಿ ಮೂಲ್ಕಿ - ಮೂಡಬಿದಿರೆ ವಿಧಾನ ಸಭಾಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಹಿರಿಯರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು,ಜಾತಿ ಮತ ಪಕ್ಷ ಭೇಧ ಮರೆತು ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕು.ಪ್ರತಿಯೊಬ್ಬರ ಮನೆಯಲ್ಲೂ ಧ್ವಜ ಹಾರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ,ರಿತೇಶ್ ಶೆಟ್ಟಿ,ಜೋಕಿಂ ಡಿ ಕೋಸ್ತಾ,ರಾಜೇಶ್ ಅಮೀನ್,ಸುಧಾಕರ ಕಾಮತ್ ,ಗಣೇಶ್ ಅರ್ಬಿ,ಲಕ್ಷ್ಮಣ್ ಮರವೂರು ,ಸುಮಾ ಶೆಟ್ಟಿ,ಲೋಕೇಶ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/08/2022 01:48 pm