ಮೂಡುಬಿದಿರೆ : ಇತ್ತೀಚೆಗೆ ನಿಧನ ಹೊಂದಿರುವ ದಲಿತ ಚಳುವಳಿಯ ನೇತಾರ, ಸಮಾಜ ಪರಿವರ್ತನಾ ನಾಯಕ ವಿ.ಡೀಕಯ್ಯ ಅವರಿಗೆ ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ)ದ ವತಿಯಿಂದ ಭಾನುವಾರ ಸಮಾಜ ಮಂದಿರ ವಠಾರದ ಸ್ವರ್ಣ ಮಂದಿರದಲ್ಲಿ ನುಡಿನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ತುಲುನಾಡ್ ಮನ್ನ ಸಮಾಜ ಸೇವಾ ಸಂಘ (ರಿ)ದ ಅಧ್ಯಕ್ಷ ವೆಂಕಣ್ಣ ಕೊಟ್ಟೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನುಡಿನಮನ ಸಲ್ಲಿಸಿದರು. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ , ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸರ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಇನಾಯತ್ ಆಟ, ಜಿ.ಎಸ್.ಪಿ.ಯ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಟಿ.ಎ.ಯಂ. ಹನೀಫ್, ರೀಟಾ ನೊರೊನ್ಹಾ, ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಯಾದವ ಶೆಟ್ಟಿ, ರಂಗಕರ್ಮಿ ಕೃಷ್ಣಪ್ಪ ಬಂಜಲ, ಸೋಮೇಶ್ವರ ಪುರಸಭೆಯ ಮುಖ್ಯಾದಿ ಕಾರಿ ಮತ್ತಾಡಿ,ಅತ್ರಾಡಿ ಅಮೃತ ಶೆಟ್ಟಿ, ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ)ದ ಗೌರವ ಸಲಹೆಗಾರ ಅಚ್ಯುತ, ತುಲುನಾಡ್ ಮನ್ನ ಸಮಾಜ ಸೇವಾ ಸಂಘ(ರಿ)ದ ಅಧ್ಯಕ್ಷ ವೆಂಕಣ್ಣ ಕೊಳ್ಳೂರು, ಸತೀಶ್ ಕಕ್ಕೆಪದವು, ಮುಖಂಡರಾದ ರಮೇಶ್ ಬೋಧಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
Kshetra Samachara
31/07/2022 03:05 pm