ಮೂಡುಬಿದಿರೆ: ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಮೂಡುಬಿದಿರೆ, ಗ್ರಾಮ ಪಂಚಾಯತ್ ಶಿರ್ತಾಡಿ ಮತ್ತು ಶ್ರೀ ತುಳಸಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಿರ್ತಾಡಿ ಇವರ ಸಹಯೋಗದಲ್ಲಿ ಮನೆ ಮನೆ ಸಂಜೀವಿನಿ ಉತ್ಪನ್ನಗಳ ಸಂಜೀವಿನಿ ಮಾಸಿಕ ಸಂತೆ ವಸ್ತು ಪ್ರದರ್ಶನ ಹಾಗು ಮಾರಾಟ ಶಿರ್ತಾಡಿ ಸಂತೆ ಮಾರ್ಕೆಟ್ ನಲ್ಲಿ ಜರುಗಿತು ಮಾಸಿಕ ಸಂತೆಯ ಉದ್ಘಾಟನೆಯನ್ನು ಶಿರ್ತಾಡಿ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ನೆರವೇರಿಸಿದರು. ಸ್ವಂತವಾಗಿ ಉತ್ಪಾದನೆ ಮಾಡಿದ ಗೃ ಹೋಪಯೋಗಿ ಉತ್ಪನ್ನಗಳ ಮಾರಾಟ ಮಾಡಲು ಯೋಗ್ಯ ವೇದಿಕೆಯಾಗಿದೆ ಎಂದರು.
ಮಹಿಳೆಯರು ಸ್ವಾವಲಂಬಿಯಾಗಲು ಸಂಜೀವಿನಿ ಯೋಜನೆಗಳಿಂದ ಸಾಧ್ಯವಿದೆ ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟ್ರಮಣ ಪ್ರಕಾಶ್ ಕೆ.,ಸದಸ್ಯರಾದ ಎಸ್ ಪ್ರವೀಣ್ ಕುಮಾರ್, ಲತಾ ಹೆಗ್ಡೆ, ರಾಜೇಶ್ ಫೆರ್ನಾಂಡಿಸ್, ದೇವಕಿ, ಅಗ್ನೇಸ್ ಡಿ’ ಸೋಜಾ, ಏನ್ ಆರ್ ಎಲ್ ಎಂ ಜಿಲ್ಲಾ ವ್ಯವಸ್ಥಾಪಕರಾದ ಹರಿಪ್ರಸಾದ್, ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ನಾಯ್ಕ್, ವಿನೀತ್ ಅಂಗನವಾಡಿಗಳ ಮೇಲ್ವಿಚಾರಕಿ ಶುಭ, ಶ್ರೀ ತುಳಸಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಯಂತಿ ಮತ್ತಿತರರು ವೇದಿಕೆಯಲ್ಲಿದ್ದರು. ನೀತಾ,. ಗೀತ ಮತ್ತು ಜಯಪ್ರದ ಪ್ರಾರ್ಥನೆಗೈದರು. ಶ್ರೀಮತಿ ಪ್ರತಿಭಾ ಸ್ವಾಗತಿಸಿದರು ಮಾನಸ ಧನ್ಯವಾದವಿತ್ತರು. ಗೀತಾ ಆರ್ ಜೈನ್ ನಿರೂಪಿಸಿದರು. ಸುಮಾರು 42 ಮಹಿಳಾ ಸದಸ್ಯರು ಸ್ವ ನಿರ್ಮಿತ ಉತ್ಪನ್ನ ಗಳನ್ನು ಮಾರಾಟ ಮಾಡಿದರು.
Kshetra Samachara
30/07/2022 03:13 pm