ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಬಟ್ರಕೆರೆಯ ಪೆರ್ಮುದೆ ಎಂಬಲ್ಲಿ ಹೆದ್ದಾರಿಯ ಮಧ್ಯಭಾಗದಲ್ಲಿ ಡಾಂಬರು ಕಿತ್ತುಹೋಗಿ ಹೊಂಡವೊಂದು ಉಂಟಾದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಪ್ರಸಿದ್ದ ಕ್ಷೇತ್ರ ಕಟೀಲು ಹಾಗೂ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹೆದ್ದಾರಿಯ ಮೂಲಕನೇ ಸಾಗಬೇಕಾಗುತ್ತದೆ.ಮಳೆ ಬಂದ ಸಂದರ್ಭ ಹೊಂಡದಲ್ಲಿ ನೀರು ನಿಂತು ಹೊಂಡವು ಗೋಚರಿಸುದಿಲ್ಲ.ಮುಖ್ಯವಾಗಿ ದ್ವಿಚಕ್ರ ವಾಹನ ಸವಾರ ರಿಗೆ ಹೆದ್ದಾರಿಯಲ್ಲಿ ಸಂಚರಿಸುವಾಗ ಅಪಾಯ ಕಟ್ಟಿಟ್ಟ ಬುತ್ತಿಯಂತಿದೆ.ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಹೊಂಡ ಮುಚ್ಚುವ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
23/07/2022 04:50 pm