ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡ್ವರ್ಟೈಸಿಂಗ್ ಪೇಪರ್ ಟು ಸ್ಕ್ರೀನ್' ಕಾರ್ಯಾಗಾರ

ಮೂಡುಬಿದಿರೆ: ಜಾಹೀರಾತು ಸೃಜನಾತ್ಮಕತೆಯಿಂದ ರೂಪುಗೊಳ್ಳುವಂತದ್ದು. ಜಾಹೀರಾತುದಾರನಿಗೆ ಅವುಗಳ ನಿರ್ಮಾಣ ಹಾಗೂ ಭಾಷೆಯ ಬಗ್ಗೆ ಅರಿವಿರಬೇಕು ಎಂದು `ಹಾಪ್ಸ್ಕಾಚ್ ಪ್ರೊಡಕ್ಷನ್' ನ ಕಾರ್ಯನಿರ್ವಾಹಕ ನಿರ್ಮಾಪಕ ಸುಕಿರ್ತ್ ರಾವ್ ಹೇಳಿದರು.

ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗವು ಹಮ್ಮಿಕೊಂಡಿದ್ದ `ಅಡ್ವರ್ಟೈಸಿಂಗ್ ಪೇಪರ್ ಟು ಸ್ಕ್ರೀನ್' ಎಂಬ ಒಂದು ದಿನದ ವಿಶೇಷ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇವರು, ಪ್ರಸಕ್ತ ಕಾಲಘಟ್ಟದಲ್ಲಿ ಜಾಹೀರಾತು ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದ್ದು, ಜಾಹೀರಾತು ಮಾರುಕಟ್ಟೆ ಬಿಲಿಯನ್ ಡಾಲರ್ ಗಳಲ್ಲಿ ವ್ಯಾಪಾರ ವಹಿವಾಟನ್ನು ಹೊಂದಿದೆ. ಒಂದು ವಸ್ತು ಗ್ರಾಹಕರನ್ನು ತಲುಪಬೇಕಾದರೆ ಅದರ ಜಾಹೀರಾತಿನ ಹಿಂದಿರುವ ಪ್ರೀ ಪ್ರೊಡಕ್ಷನ್ ಕಾರ್ಯಗಳು ವ್ಯವಸ್ಥಿತವಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಗಾರದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಜಾಹಿರಾತು ನಿರ್ಮಾಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ವಿಶೇಷ ವರದಿಗಳನ್ನು ಪ್ರಸ್ತುತ ಪಡಿಸಲು ಆರಂಭಿಸಲಾದ `ಆಳ್ವಾಸ್ ಪ್ರಿಸಮ್’ ಬುಲೆಟಿನ್‌ನ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ನಿಕಾಯದ ಡೀನ್ ಸಂಧ್ಯಾ ಕೆ. ಎಸ್, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗ್ರೇಷಲ್ ನಿರೂಪಿಸಿದರು, ವಿದ್ಯಾರ್ಥಿನಿ ಸೃಷ್ಟಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

20/07/2022 05:06 pm

Cinque Terre

1.09 K

Cinque Terre

0

ಸಂಬಂಧಿತ ಸುದ್ದಿ