ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಳವೂರು:ವಿದ್ಯುತ್ ಅಘಾತದಿಂದ ಸ್ವಲ್ಪದರಲ್ಲೆ ಪಾರಾದ ನಾಲ್ಕು ಜೀವಗಳು

ಬಜಪೆ : ವಿದ್ಯುದಾಘಾತದಿಂದ ಸ್ವಲ್ಪದರಲ್ಲೇ  ನಾಲ್ಕು ಜೀವಗಳು ಪಾರಾದ ಘಟನೆ ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ನಾಗಂದಡಿ ಎಂಬಲ್ಲಿ ನಡೆದಿದೆ.  

ಇಲ್ಲಿನ ಕೃಷಿಕ ಅಜಯ್ ಅಮೀನ್ ಎಂಬವರು  ಬೆಳಿಗ್ಗೆ ದನಗಳ ಹಾಲು ಕರೆದು  2 ದನ ಮತ್ತು ಒಂದು ಕರುವನ್ನು ಮೇಯಲು ತೋಟದಲ್ಲಿ ಕಟ್ಟಿ ತಮ್ಮ ಕೆಲಸಕ್ಕೆ ತೆರಳಿದ್ದರು. ಕೆಲ ಸಮಯದ ನಂತರ ತೋಟದಿಂದ ದನದ ಆರ್ತನಾದ  ಕೇಳಿದ್ದು ತಕ್ಷಣ ಅಜಯ್ ಅವರ ಪತ್ನಿ ಸೌಮ್ಯ ತೋಟಕ್ಕೆ ದಾವಿಸಿದಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳ ಮೇಲೆ ಮರವೊಂದು ಬಿದ್ದು ತಂತಿ ತುಂಡಾಗಿ ಕೆಳಗಡೆ ಮೆಯುತಿದ್ದ ದನಕ್ಕೆ ಸ್ಪರ್ಷಿಸಿ ಹಸು  ಒದ್ದಾಡುತ್ತಿರುವುದನ್ನು  ಕಂಡು  ಧೃತಿಗೆಡದೆ ಮುತ್ತೂರು ಪಂಚಾಯತ್ ಸದಸ್ಯ ಜಗದೀಶ್ ಎಂಬವರಿಗೆ ಮಾಹಿತಿ ನೀಡಿದ್ದರು.

ಜಗದೀಶ್ ಅವರು ತಕ್ಷಣ ಮೆಸ್ಕಾಂ ಎಡಪದವು ಸೆಕ್ಷನ್ ಗೆ ಮಾಹಿತಿಯನ್ನು ನೀಡಿದ್ದು, ಮಾಹಿತಿ ಪಡೆದ ಮೆಸ್ಕಾಂ ಕೂಡಲೇ ನಾಗದಂಡಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದರು.ಮೆಸ್ಕಾಂ ಇಲಾಖೆಯು ಕೂಡಲೇ ಸ್ಪಂದಿಸಿದ್ದರಿಂದ ಮೇಯಲು ಕಟ್ಟಿದ್ದ ಎರಡು ಹಸುಗಳು ಮತ್ತು ಮನೆಯೊಡತಿ ಸೌಮ್ಯ ಹಾಗೂ ಸ್ಥಳೀಯರೊಬ್ಬರು ವಿದ್ಯುದಾಘಾತದಿಂದ ಪಾರಾಗಿದ್ದಾರೆ. 

ಒಂದು ವೇಳೆ  ಮೆಸ್ಕಾಂಗೆ ಮಾಹಿತಿ ನೀಡದೆ ಇದ್ದರೆ ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿದ್ದ ಹಸುವನ್ನು ಮುಟ್ಟುತ್ತಿದ್ದರೆ  ಭಾರೀ ಅನಾಹುತ ನಡೆಯುತ್ತಿತ್ತು. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ  ಸ್ಪಂದಿಸಿದ ಮೆಸ್ಕಾಂ, ಮನೆಯೊಡತಿ ಸೌಮ್ಯ ಮತ್ತು ಪಂಚಾಯತ್ ಸದಸ್ಯ ಜಗದೀಶ್ ಅವರ  ಸಮಯಪ್ರಜ್ಞೆ ಯಿಂದಾಗಿ ನಾಲ್ಕು ಜೀವಗಳು ಅಪಾಯದಿಂದ ಪಾರಾಗಿದೆ. 

Edited By : PublicNext Desk
Kshetra Samachara

Kshetra Samachara

20/07/2022 03:28 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ