ಬಜಪೆ:ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ 2022 ನೇ ಸಾಲಿನ ರಾಜ್ಯ ಮಟ್ಟದ "ಸಿರಿ ಚಾವಡಿ ಸಂಘಟನಾ ಪುರಸ್ಕಾರವನ್ನು" ರಜತ ವರ್ಷಗಳನ್ನು ಪೂರೈಸಿ ನಾಡು ನುಡಿಯ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಸಂಘಟನಾತ್ಮಕವಾಗಿ ವಿಶೇಷವಾಗಿ ಗುರುತಿಸಿಕೊಂಡು ಇದೀಗ 26 ನೇ ವರ್ಷದ ಅರ್ಥಪೂರ್ಣ ಹೆಜ್ಜೆಯಲ್ಲಿರುವ "ವಿಜಯ ಯುವ ಸಂಗಮ (ರಿ ) ಎಕ್ಕಾರು ಸಂಸ್ಥೆಗೆ " ನಿನ್ನೆ ತುಳುಭವನದ ಸಿರಿ ಚಾವಡಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವ ಎಂ. ಪ್ರಮೋದ್ ಮಧ್ವಾರಾಜ್ ಅವರು ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ರವರು ವಹಿಸಿದ್ದರು .
Kshetra Samachara
18/07/2022 02:03 pm