ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಆಳ್ವಾಸ್ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ಮೂಡುಬಿದಿರೆ: ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ 2022ನೇ ಸಾಲಿನ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆಳ್ವಾಸ್ ಶಾಲಾ ವಿದ್ಯಾರ್ಥಿಗಳು ಬಾಲ ಹಾಗೂ ಕಿಶೋರ ವಿಭಾಗಗಳ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.

ಬಾಲ ವಿಭಾಗ:

ಚಿತ್ರಕಲೆಯಲ್ಲಿ ರಿಷಬ್ ಹೆಚ್. ಎಮ್ ಪ್ರಥಮ, ನೃತ್ಯ ಭಜನೆಯಲ್ಲಿ ನಿತ್ಯ ºರೀಶ್ ಕಟ್ಟಿ ಮತ್ತು ಬಳಗ ಪ್ರಥಮ, ಸುಶಾನ್ ಡಿ ಪೂಜಾರಿ ಮತ್ತು ಬಳಗ ದ್ವಿತೀಯ, ರಂಗೋಲಿಯಲ್ಲಿ ಸುಶ್ಮಿತಾ ಪ್ರಕಾಶ್ ಚಚಡಿ ಮತ್ತು ಲಕ್ಷೀ ಹನುಮಂತಪ್ಪ ಜೋಗಿ ಪ್ರಥಮ, ಸೃಷ್ಟಿ ಮತ್ತು ಭಕ್ತಿ ಗಿರೀಶ್ ನಾಯ್ಕ್ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಕಿಶೋರ ವಿಭಾಗ:

ಭರತನಾಟ್ಯ (ಯುಗಳ)ದಲ್ಲಿ ಸಹನ ಎಸ್ ಅನಗೊಲ್ಕರ್ ಮತ್ತು ಗಾನಶ್ರಿ ಜೈನ್ ದ್ವಿತೀಯ, ನೃತ್ಯ ಭಜನೆಯಲ್ಲಿ ಸಿದ್ಧಲಿಂಗೆಶ್ವರಿ ಎಸ್ ಭುಮ್ಮನ್ನವರ್ ಮತ್ತು ಬಳಗ ಪ್ರಥಮ, ಮನುಜ ನೇಹಿಗ ಮತ್ತು ಬಳಗ ತೃತೀಯ, ರಂಗೋಲಿಯಲ್ಲಿ ವೈಷ್ಣವಿ ಎಸ್ ಐ ಮತ್ತು sವೇದಾ ಡಿ ವಿ ಪ್ರಥಮ, ಪರ‍್ಣಿಮ ಉದಯ್ ಕುಮಾರ್ ಪಾಟಿಲ್ ಮತ್ತು ವಿದ್ಯಾ ದ್ವಿತೀಯ, ಶಂಖನಾದದಲ್ಲಿ ಅಮೋಘ ಹೆಗ್ಡೆ ಪ್ರಥಮ, ಭರತ್ ಬಿ.ಎಸ್ ತೃತೀಯ ಬಹುಮಾನ ಗಳಿಸಿದ್ದಾರೆ. ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/07/2022 06:36 pm

Cinque Terre

538

Cinque Terre

0

ಸಂಬಂಧಿತ ಸುದ್ದಿ