ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಗತಿಕ ತಾಪಮಾನ ಏರಿಕೆ ತಡೆಗೆ ಅರಣ್ಯ ಬೆಳೆಸುವುದು ಅನಿವಾರ್ಯ: ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್

ಕಾರ್ಕಳ: ರೋಟರಿ ಸಂಸ್ಥೆ ಕಾರ್ಕಳ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಕಾರ್ಕಳ ರೋಟರಿ ಬಾಲಭವನದಲ್ಲಿ ನಡೆಯಿತು.

ಕಾರ್ಕಳ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ವನಮಹೋತ್ಸವ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಕಂಡಿದೆ ತಡೆಗಟ್ಟಲು ಹಸಿರು ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ, ಮಕ್ಕಳಲ್ಲಿ ಅರಣ್ಯ ನಾಶದಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಬೇಕು, ಹಸಿರೇ ಉಸಿರು ಎನ್ನುವ ಧೇಯವಾಕ್ಯ ಮನೆಯಲ್ಲೇ ಆರಂಭವಾಗಬೇಕು ಎಂದರು.

ಈ ಸಂದರ್ಭದಲ್ಲಿ ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಭರತೇಶ್ ಅದಿರಾಜ್ ,ವಲಯ ಸೇನಾನಿ ಸುವರ್ಣ ನಾಯಕ್ ,ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು .ರೋಟರಿ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಶೆಣೈ ವೈ ಸ್ವಾಗತಿಸಿದರು .ಕಾರ್ಯದರ್ಶಿ ಶಿವಕುಮಾರ್ ಧನ್ಯವಾದವನ್ನು ನೀಡಿದರು . ರಮಿತಾ ಶೈಲೇಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

16/07/2022 12:52 pm

Cinque Terre

1,000

Cinque Terre

0

ಸಂಬಂಧಿತ ಸುದ್ದಿ