ಬಜಪೆ:ಎಡಪದವು-ಕುಪ್ಪೆಪದವು-ಬಂಟ್ವಾಳ ರಾಜ್ಯ ಹೆದ್ದಾರಿಯ ಮುತ್ತೂರು ನೂದೋಟ್ಟು ಎಂಬಲ್ಲಿ ರಸ್ತೆ ಕುಸಿದು ಹೋಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹೆದ್ದಾರಿಯಲ್ಲಿ ಅಂದಾಜು 60 ಮೀಟರ್ ಉದ್ದಕ್ಕೆ ರಸ್ತೆ ಸುಮಾರು 2 ಅಡಿ ಒಳಭಾಗಕ್ಕೆ ಕುಸಿದಿದ್ದು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ರಸ್ತೆ ಸಂಪೂರ್ಣವಾಗಿ ಕುಸಿದರೆ ಬಂಟ್ವಾಳ ಮತ್ತು ಕುಪ್ಪೆಪದವು ನಡುವೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಮಂಗಳೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಎಡಪದವು ಸಮೀಪದ ಕೊರ್ಡೇಲ್ ಎಂಬಲ್ಲಿಂದ ಜಲ್ಲಿ ಸಾಗಿಸುವ ಬ್ರಹತ್ ವಾಹನಗಳ ಸಂಚಾರದಿಂದ ಇಲ್ಲಿ ರಸ್ತೆ ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Kshetra Samachara
12/07/2022 07:40 am