ಬಜಪೆ : ಕುಪ್ಪೆಪದವು ಸಮೀಪದ ಕಿಲೆಂಜಾರು ಗ್ರಾಮದ ಉಳಿಪಾಡಿಯಲ್ಲಿ ಗುಡ್ಡ ಕುಸಿದು ತೋಡಿಗೆ ಮಣ್ಣು ಬಿದ್ದ ಪರಿಣಾಮ ತೋಡಿನ ನೀರು ಕೃಷಿಕ ರಾಜೇಶ್ ಶೆಟ್ಟಿ ಅವರ ತೋಟಕ್ಕೆ ನುಗ್ಗಿದ್ದು ಅಡಿಕೆ ತೋಟ ಸಂಪೂರ್ಣ ಮುಳುಗಡೆಯಗಿ ಅಪಾರ ನಷ್ಟ ಸಂಭವಿಸಿದೆ.
ಶುಕ್ರವಾರ ರಾತ್ರಿ ಗುಡ್ಡ ಕುಸಿದು ತೋಡಿಗೆ ಬಿದ್ದು ಪ್ರವಾಹದ ನೀರು ತೋಟಕ್ಕೆ ನುಗ್ಗಿದ್ದು, ಇಂಜಿನಿಯರ್ ಮತ್ತು ಸ್ಥಳೀಯ ಮುಖಂಡ ಜಗದೀಶ್ ಕುಳಾಲ್ ಪಾಕಜೆ ಸ್ಥಳಕ್ಕೆ ಭೇಟಿ ನೀಡಿ ಬಿದ್ದಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರೂ, ಶನಿವಾರ ರಾತ್ರಿ ಮತ್ತಷ್ಟು ಗುಡ್ಡ ಕುಸಿದ ಪರಿಣಾಮ ಹೊಸದಾಗಿ ನಿರ್ಮಿಸಲಾಗಿರುವ ಆಣೆಕಟ್ಟೆಯ ಮೇಲೆ ಐದು ಮೀಟರ್ ನಷ್ಟು ಎತ್ತರಕ್ಕೆ ಮಣ್ಣು ತುಂಬಿದೆ ಪರಿಣಾಮವಾಗಿ ಮಳೆಯ ನೀರಿನ ಹರಿವಿಗೆ ತಡೆಯಾಗಿ ತೋಟಕ್ಕೆ ನುಗ್ಗಿದ್ದು ತೋಡಿನ ಸುಮಾರು 200 ಮೀಟರ್ ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ. ಮಳೆ ಮುಂದುವರಿದು ತಡೆಗೋಡೆ ಕುಸಿದಲ್ಲಿ ರಾಜೇಶ್ ಶೆಟ್ಟಿ ಅವರ ಅಡಿಕೆ ತೋಟ ಸಂಪೂರ್ಣ ಕೊಚ್ಚಿ ಹೋಗುವ ಸಾಧ್ಯತೆ ಇದೆ.
Kshetra Samachara
10/07/2022 10:36 pm