ಮೂಡುಬಿದಿರೆ: ಸೃಜನಶೀಲತೆಯನ್ನು ತನ್ನೊಳಗೆ ರೂಪಿಸಿಕೊಂಡ ವ್ಯಕ್ತಿ ತನ್ನ ಜೀವನದಲ್ಲಿ ಉಲ್ಲಾಸವನ್ನು ಹೊಂದಿರುತ್ತಾನೆ. ಜೊತೆಗೆ ಜೀವನವನ್ನು ಪ್ರೀತಿಸುತ್ತಾನೆ. ಇದು ಪ್ರತಿಯೊಬ್ಬರಲ್ಲಿಯೂ ಇರಬೇಕಾದ ಗುಣ, ಸೃಜನಶೀಲತೆ ಎಂಬುವುದು ಹರಿಯುವ ನೀರಿನ ಹಾಗೆ, ನಿಂತ ನೀರಿಗೆ ಭವಿಷ್ಯವಿಲ್ಲ ಹರಿಯುವ ನೀರಿಗೆ ಶುದ್ಧತೆಯೊಂದಿಗೆ ಭರವಸೆ ಕೂಡ ಇರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಂಭಾಗಣದಲ್ಲಿ ನಡೆದ ಅಂತಿಮ ಪದವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಗುಣೇಶ್ ಭಾರತೀಯ ಸಂಗೀತ ಗಾಯನದಲ್ಲಿ ಮೂಡಿಬಂದ ಸರ್ವಜ್ಞ ಕವಿ-ನುಡಿ ಪ್ರೇರಿತ `ಸರ್ವಜ್ಞ' ಆಲ್ಬಮ್ ಸಾಂಗ್‌ನ್ನು ಬಿಡುಗಡೆಗೂಳಿಸಿ ಮಾತನಾಡಿದರು.
ಇಷ್ಟದ ಕೆಲಸವನ್ನು ಕಷ್ಟಪಟ್ಟು ಮಾಡಿದಾಗ ಯಶಸ್ಸಿನ ಉತ್ತುಂಗಕ್ಕೆರಲು ಸಾಧ್ಯ. ಬೆವರು ಸುರಿಸಿ ದುಡಿದ ಸಂಪತ್ತು ಜೀವನದ ಆಸ್ತಿಯಾಗಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಪ್ರತಿಭೆಯುಳ್ಳ ವಿದ್ಯಾರ್ಥಿಗಳ ಕನಸ್ಸಿಗೆ ಆಳ್ವಾಸ್ ಸಂಸ್ಥೆಯು ಬೆನ್ನೆಲುಬಾಗಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಪ್ರತಿಭೆಯುಳ್ಳ ಅನೇಕ ವಿದ್ಯಾರ್ಥಿಗಳು ತಮ್ಮ ಕಲೆಯ ಮೂಲಕ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಗುಣೇಶ್ ಭಾರತೀಯ ಮ್ಯೂಸಿಕ್ಸ್ ನಿರ್ಮಾಣದಲ್ಲಿ, ಶ್ರೀಗೌರಿ ಜೋಷಿ ನಿರ್ದೇಶನದ, ಅಕ್ಷಯ್ ರೈ ಸಂಕಲನದ, ಗುಣೇಶ್ ಭಾರತೀಯ ಸಂಗೀತ ಗಾಯನದೊಂದಿಗೆ, ಪೆನಜ ಸಾಹಿತ್ಯ, ಕಾರ್ತಿಕ್ ಎ ಸಂಭಾಪುರ ಸಂಗೀತ ನಿರ್ಮಾಣದಲ್ಲಿ, ಕಲಾವಿದರಾದ ಅನುಶ್ರೀ ಕೆ.ಟಿ, ಅಮೀರ್ ಕೆ.ಎಂ, ಕೆವಿನ್ ಶೆರ್ವಿನ್ ಮಸ್ಕರೇನಸ್, ಭೂಮಿಕಾ ರಘು, ಆಶಿಕಾ ಎನ್.ಎಸ್ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವೀಡಿಯೋಗ್ರಫಿಯಲ್ಲಿ ಸರ್ವಜ್ಞ ಆಲ್ಬಮ್ ಸಾಂಗ್ ಮೂಡಿಬಂದಿದೆ. ಕರ‍್ಯಕ್ರಮದಲ್ಲಿ ೫ ನಿಮಿಷ ೭ ಸೆಂಕೆಂಡಿನ ಆಲ್ಬಮ್ ಸಾಂಗ್‌ನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮ ಉಪನ್ಯಾಸಕಿ ಸಂಧ್ಯಾ ಕೆ.ಎಸ್, ಪ್ರೊಫೆಸರ್ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಖ್ಯಾತ್ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು.
Kshetra Samachara
09/07/2022 01:43 pm