ಕಾರ್ಕಳ: ದೇಶದಾದ್ಯಂತ ಭಾರೀ ಜನಪ್ರಿಯತೆ ಗಳಿಸುತ್ತಿರುವ ಅರವಿಂದ ಕೇಜ್ರಿವಾಲ್ ಸ್ಥಾಪಿಸಿದ ಆಮ್ ಆದ್ಮಿ ಪಕ್ಷವು ಇದೀಗ ಕಾರ್ಕಳದಲ್ಲಿ ನೆಲೆಯೂರಲು ಪ್ರಯತ್ನಿಸಿದೆ.
ಈ ಹಿಂದೆ ಕಾರ್ಕಳದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಸ್ಥಳೀಯ ಕಾರ್ಯಕರ್ತರ ಜತೆಗೆ ಸಾಕಷ್ಟು ಸಭೆಗಳನ್ನು ನಡೆಸಿ,ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ನಡೆಸಲಾಗಿತ್ತು.
ಕಾರ್ಕಳ ತಾಲೂಕಿನಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಆಮ್ ಆದ್ಮಿ ಪಕ್ಷದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಉದ್ಯಮಿ ಸಮಾಜಸೇವಕ ಮಿಯ್ಯಾರಿನ ಡೇನಿಯಲ್ ರೇಂಜರ್ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿದ್ದ ಡೇನಿಯಲ್ ಪ್ರಸ್ತುತ ಮಿಯಾರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಸತತ ಮೂರು ಬಾರಿ ಮಿಯ್ಯಾರು ಪಂಚಾಯತ್ಸದಸ್ಯರಾಗಿದ್ದ ಡೇನಿಯಲ್ ರೇಂಜರ್ ಪಕ್ಷಾತೀತವಾಗಿ ಸಾಕಷ್ಟು ಜನಬೆಂಬಲ ಹೊಂದಿದ್ದಾರೆ. ಈ ಹಿಂದೆ 2018ರಲ್ಲಿ ಕಾಂಗ್ರೆಸ್ ನಿಂದ ಮುನಿಯಾಲು ಉದಯ ಶೆಟ್ಟಿಯವರಿಗೆ ಟಿಕೆಟ್ ಕೊಡಿಸಲು ಭಾರೀ ಹೋರಾಟ ನಡೆಸಿದ್ದರು.ಇದೀಗ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದಾರೆ ಇವರ ಈ ನಡೆ ಕಾಂಗ್ರೆಸ್ ಗೆ ಹಿನ್ನೆಡೆಯಾಗಿದೆ.
ಆಮ್ ಆದ್ಮಿ ಪಕ್ಷದ ಸಂಘಟನಾ ಉಸ್ತುವಾರಿ ಅಬ್ದುಲ್ ಖಾದರ್, , ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಆಶೀಶ್ ಶೆಟ್ಟಿ, ಖಜಾಂಚಿಯಾಗಿ ದಯಾನಂದ ಶೆಟ್ಟಿ, ಜಿಲ್ಲಾ ಸಮಿತಿಯ ವಕ್ತಾರರಾಗಿ ದೀಪಕ್ ಡಿ’ಮೆಲ್ಲೊ,, ಕಾನೂನು ಸಲಹೆಗಾರರಾಗಿ ವಿವೇಕಾನಂದ ಮಲ್ಯ ನೇಮಕಗೊಂಡಿದ್ದಾರೆ.
Kshetra Samachara
07/07/2022 02:15 pm