ಮಂಗಳೂರು:ಅಗ್ನಿಪಥ್ ಯೋಜನೆಯ ಉದ್ದೇಶ, ಅದರಿಂದ ಯುವಜನಾಂಗಕ್ಕೆ ಆಗುವ ಪ್ರಯೋಜನಗಳು, ನೇಮಕಾತಿ ಪ್ರಕ್ರಿಯೆ ವಿಷಯಗಳ ಬಗ್ಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಸೇನಾಧಿಕಾರಿಗಳ ಜೊತೆ ಸಮಾಲೋಚನಾ ಸಭೆಯನ್ನು ಲಾಲ್ ಭಾಗ್ ನಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಗ್ನಿವೀರರ ಆಯ್ಕೆ ನಡೆಯಲಿದ್ದು, ಅದಕ್ಕಾಗಿ ಯುವಕ, ಯುವತಿಯರಿಗೆ ಸೂಕ್ತ ಜಾಗೃತಿ ನೀಡುವ ಬಗ್ಗೆ ಸೇನಾ ನೇಮಕಾತಿ ಆಫೀಸರ್ ಮೇಜರ್ ಸುನೀಲ್ ಹಾಗೂ ಕರ್ನಲ್ ಅನುಜ್ ಗುಪ್ತ ಅವರೊಂದಿಗೆ ಶಾಸಕರು ಮಾತುಕತೆ ನಡೆಸಿದರು.
ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ,ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
06/07/2022 07:38 pm