ಬಜಪೆ:ಎಡಪದವು ಗ್ರಾಮ ಪಂಚಾಯತ್ ನ 2022 -23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಎಡಪದವು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮಸಭೆಯಲ್ಲಿ ಕೊಂಪದವು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೆರಿಸಿ 24 ಗಂಟೆ ಸೇವೆ ನೀಡಬೇಕು.ಗಾಂಧಿನಗರ ಎಂಬಲ್ಲಿಯ ಕೋಳಿ ಫಾರಂ ನಿಂದ ಪರಿಸರ, ವಾಯು ಮಾಲಿನ್ಯ ವಾಗುತ್ತಿದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಎಡಪದವು ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಚರಂಡಿ ಇಲ್ಲದೇ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಚರಂಡಿ ನಿರ್ಮಾಣವಾಗಬೇಕು.ಪಡಿತರದಲ್ಲಿ ಕುಚಲಕ್ಕಿ ನೀಡ ಬೇಕು.ಮುಂತಾದ ವಿಷಯಗಳನ್ನು ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಇಲಾಖೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವಿಜಯಕುಮಾರ್ ನೋಡಲ್ ಅಧಿಕಾರಿಯಾಗಿದ್ದರು.
ಕೃಷಿ, ಅರಣ್ಯ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗಣಿ ಸೇರೀದಂತೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಒಣಕಸದ ಜತೆಯಲ್ಲಿ ಬಾಟಲಿ ಚೂರುಗಳನ್ನು ಹಾಕಿದ ಪರಿಣಾಮ ಕಸ ವಿಲೇವಾರಿ ಕಾರ್ಮಿಕರಿಗೆ ತೊಂದರೆ, ಬಾಟಲಿ ಚೂರು ಬೇರೆಸದಂತೆ ಪಂಚಾಯತ್ ನಿಂದ ಗ್ರಾಮಸ್ಥರಿಗೆ ಮನವಿ ಮಾಡಲಾಯಿತು.
ಗ್ರಾಮ ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಪ್ರೇಮ, ಪಿಡಿಓ ರಾಜೀವಿ ನಾಯ್ಕ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಇಸ್ಮಾಯಿಲ್ ಸ್ವಾಗತಿಸಿ ವರದಿ ಮಂಡಿಸಿದರು ಸಿಬ್ಬಂದಿ ಸಹಕರಿಸಿದರು. ಗ್ರಾಮಸಭೆಗೆ ಆಗಮಿಸಿದವರಿಗೆ ಪಂಚಾಯತ್ ವತಿಯಿಂದ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
Kshetra Samachara
05/07/2022 11:24 am