ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಲೂರು: ಕೃತಕ ನೆರೆಯಿಂದ ಸಾರ್ವಜನಿಕರಿಗೆ ಸಮಸ್ಯೆ, ಪ್ರದೇಶಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

ಮಲ್ಲೂರು:ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಜಿಲಗುಡ್ಡೆ ಏರಿಯಾದಲ್ಲಿ ಲೋಕೋಪಯೋಗಿ ಇಲಾಖೆಯ ಸಾರ್ವಜನಿಕ ರಸ್ತೆಗೆ ತಾಗಿದ್ದ ಖಾಸಗಿ ಜಮೀನಿನಲ್ಲಿ ಮಣ್ಣು ಹಾಕಿದ್ದರಿಂದ ವಾಹನ ಸಂಚಾರದ ರಸ್ತೆ ಇಳಿಜಾರಾಗಿ ಗುಂಡಿ ಬಿದ್ದ ಪರಿಣಾಮ ರಸ್ತೆ ಮೇಲೆ ಬಿದ್ದ ಮಳೆ ನೀರು ಹಿಂದಿನಂತೆ ಸರಾಗವಾಗಿ ಹರಿಯದೆ ಇದರಿಂದ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿತ್ತು. ಸ್ಥಳಕ್ಕೆ ಮಂಗಳೂರು ಉತ್ತರ ಡಾ.ಭರತ್ ಶೆಟ್ಟಿಯವರು ಶನಿವಾರ ಭೇಟಿ ನೀಡಿ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿ, ಮಳೆ ನೀರು ಸರಾಗ ಹರಿದು ಹೋಗಲು ಇದ್ದ ಅಡೆತಡೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಈಗ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾದ ಬಳಿಕ ರಸ್ತೆಯ ಅಭಿವೃದ್ಧಿಗೆ ಶಾಶ್ವತ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಅಲ್ಲಿಯೇ ಸನಿಹದಲ್ಲಿ ಮನೆಯೊಂದರ ಹಿಂಬದಿಯ ತಡೆಗೋಡೆ ಭಾರಿ ಮಳೆಗೆ ಕುಸಿದು ಬಿದ್ದು, ಹಾನಿ ಸಂಭವಿಸಿತ್ತು. ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿದ ಶಾಸಕರು ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

Edited By : PublicNext Desk
Kshetra Samachara

Kshetra Samachara

03/07/2022 10:58 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ