ಗುರುಪುರ:ಉಳಾಯಿಬೆಟ್ಟು ಗ್ರಾಮದ 4ನೇ ವಾರ್ಡಿನಲ್ಲಿ ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜೆಯನ್ನುಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು.
ಉಳಾಯಿಬೆಟ್ಟು ಗ್ರಾಮಪಂಚಾಯತ್ ನ ಗ್ರಾಮಸಭೆಯಲ್ಲಿ ಭಾಗವಹಿಸಿ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪ್ರತಿಯನ್ನು ಶಾಸಕರು ನೀಡಿದರು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷ ಹರಿಕೆಶ್ ಶೆಟ್ಟಿ, ಉಪಾಧ್ಯಕ್ಷೆ ರತ್ನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ದಿನೇಶ್ ಬಜಿಲೋಟ್ಟು, ಪಂಚಾಯತ್ ಮಾಜಿ ಸದಸ್ಯರಾದ ಕಮಲಾಕ್ಷ ತಳ್ಳಿಮಾರ್ ಸುದರ್ಶನ್ ಶೆಟ್ಟಿ ಪೆರ್ಮಕಿ, ಪಂಚಾಯತ್ ಸದಸ್ಯರುಗಳು, ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾದ ಶ್ರೀಧರ್ ಬೇಟೆಮಾರ್, ರುಕ್ಮಯ್ಯ, ಕರ್ಮರ್ ಲಚ್ಚಿಲ್ ಅಂತೋನಿ ಡಿ ಸೋಜಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/07/2022 04:16 pm