ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಕಾರ್ಯ ಶ್ಲಾಘನೀಯ

ಮಂಗಳೂರು:ರಾಷ್ಟ್ರದ ಬಗ್ಗೆ ವಿಶೇಷ ಅಭಿಮಾನ, ಧ್ಯೇಯ, ನಿಷ್ಟೆ ಹೊಂದಿರುವ ಮಿತ್ರಪಟ್ಣ ಮೊಗವೀರ ಸಂಘ ( ರಿ) ಶ್ರೇಷ್ಟ ಮಾದರಿ ಕಾರ್ಯಗಳ ಮೂಲಕ ಜನಮೆಚ್ಚುಗೆಯನ್ನು ಪಡೆದಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಹೇಳಿದರು.

ಅವರು ಇಂದು ಮಿತ್ರಪಟ್ಣ ಜ್ಞಾನದೇಗುಲದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ನೆರವೇರಿಸಿದರು.

ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಕೂಡ ನೀಡುವ ಕಾರ್ಯ ಮಾಡುತ್ತಿರುವ ಮಿತ್ರಪಟ್ಣ ಮೊಗವೀರ ಸಂಘಕ್ಕೆ ಅಭಿನಂದನೆಗಳನ್ನು ಶಾಸಕರು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಐದುಪಟ್ಣ ಮೊಗವೀರ ಸಂಘದ ಅಧ್ಯಕ್ಷರಾದ ಸುರೇಶ್ ಕರ್ಕೇರ, ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷರಾದ ರವೀಂದ್ರ ಕರ್ಕೇರಾ, ಪಾಲಿಕೆ ಸದಸ್ಯರಾದ ಶೋಭಾ ರಾಜೇಶ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/06/2022 05:12 pm

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ