ಕಿನ್ನಿಗೋಳಿ :ಕಿನ್ನಿಗೋಳಿಯಿಂದ ಕಟೀಲಿಗೆ ಸಂಪರ್ಕಿಸುವ ರಸ್ತೆಯ ಕಿನ್ನಿಗೋಳಿಯ ರಾಜರತ್ನಪುರ ಎಂಬಲ್ಲಿ ರಸ್ತೆಯ ಅಂಚಿನಲ್ಲಿ ಮಳೆಯ ನೀರು ಸಂಗ್ರಹ ವಾಗುತ್ತಿದ್ದು, ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಿನ್ನಿಗೋಳಿಯಿಂದ ಕಟೀಲು ಹಾಗೂ ಇನ್ನಿತರ ಕಡೆಗಳಿಗೆ ಸಂಚಾರವನ್ನು ಕಲ್ಪಿಸುವಂತಹ ತೀರಾ ಹತ್ತಿರದ ರಸ್ತೆ ಇದಾಗಿದೆ.
ಈ ಬಗ್ಗೆ ಸಂಬಂಧಪಟ್ಟವರು ರಸ್ತೆಯಂಚಿನಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
25/06/2022 03:04 pm