ದೇರೆಬೈಲ್ :ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 24 ದೇರೆಬೈಲ್ ದಕ್ಷಿಣದ ನೆಕ್ಕಿಲಗುಡ್ಡೆ ಪರಿಸರದ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದ ತಡೆಗೋಡೆ ನಿರ್ಮಾಣದ ವೇಳೆ ಮಳೆಯ ನೀರಿನ ರಭಸಕ್ಕೆ ಮನೆಯೊಂದು ಕುಸಿಯುವ ಭೀತಿಯಲ್ಲಿದ್ದು, ಸ್ಥಳಕ್ಕೆ
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನವನ್ನು ಹೇಳಿದರು.
ಯಾವುದೇ ರೀತಿಯ ತೊಂದರೆಯಾದಲ್ಲಿ ನಮ್ಮ ಸರಕಾರ ಮತ್ತು ಶಾಸಕನ ನೆಲೆಯಲ್ಲಿ ಹಾಗೂ ವೈಯಕ್ತಿಕವಾಗಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಚರಿತ್ ಪೂಜಾರಿ, ಮಹಾಶಕ್ತಿಕೇಂದ್ರ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖ್ ಸೂರ್ಯನಾರಾಯಣ ತುಂಗಾ, ಪ್ರೀತಮ್, ಎಂ.ಎಸ್ ಪೈ , ಪುನೀತ್ ನಿಖಿಲ ಗುಡ್ಡೆ, ಸ್ಥಳೀಯರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
Kshetra Samachara
21/06/2022 05:42 pm