ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ರಸ್ತೆಯಂಚಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ,ಸ್ಥಳೀಯರ ಆಗ್ರಹ

ಬಜಪೆ:ರಸ್ತೆಯಂಚಿನಲ್ಲಿ ಅಸಮರ್ಪಕ ರೀತಿಯಲ್ಲಿನ ಚರಂಡಿ ವ್ಯವಸ್ಥೆಯಿಂದಾಗಿ ಮಳೆಯ ನೀರು ರಸ್ತೆಯಂಚಿನಲ್ಲಿಯೇ ಸಂಗ್ರಹವಾಗುತ್ತಿದೆ.ಇಂತಹ ದೃಶ್ಯ ವು ಕಂಡುಬಂದಿದ್ದು,ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಕಟೀಲು ಸೇತುವೆಯಿಂದ - ಕಿನ್ನಿಗೋಳಿಗೆ ಸಂಪರ್ಕಿಸುವ ರಸ್ತೆಯ ಜಂಕ್ಷನ್ ಬಳಿ.

ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವಂತಹ ರಸ್ತೆ ಇದಾಗಿದ್ದು, ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂಲ್ಕಿ ,ಕಿನ್ನಿಗೋಳಿ ಹಾಗೂ ಇನ್ನಿತರ ಕಡೆಗಳಿಂದ ಬರುವವರು ಈ ರಸ್ತೆ ಮುಖೇನವೇ ಸಾಗಬೇಕಾಗುತ್ತದೆ.ಅಲ್ಲದೆ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಸಮೀಪವೇ ಇದೆ.ದೇವಳಕ್ಕೆ ಬರುವಂತಹ ಭಕ್ತರು ಕೂಡ ಈ ರಸ್ತೆಯ ಮೂಲಕನೇ ಬರಬೇಕಾಗುತ್ತದೆ.

ಕಳೆದ ಕೆಲ ವರ್ಷಗಳ ಹಿಂದೆಯಷ್ಠೆ ರಸ್ತೆಯು ಆಗಲೀಕರಣ ಗೊಂಡಿದ್ದು,ಈ ಸಂದರ್ಭ ಕೆಲವೊಂದು ಕಡೆಯ ರಸ್ತೆಯ ಅಂಚಿನಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡದ ಕಾರಣ ಮಳೆಯ ನೀರು ರಸ್ತೆಯಲ್ಲಿಯೇ ಸಂಗ್ರಹವಾಗುತ್ತಿದೆ ಎಂದು ಸ್ಥಳೀಯರ ಮಾತು.ಈ ಬಗ್ಗೆ ಸಂಬಂಧಪಟ್ಟ ಇಲಾಖೆಯು ರಸ್ತೆಯ ಅಂಚುಗಳ ಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂಬುವುದು ಸ್ಥಳೀಯರ ಆಗ್ರಹ.

Edited By : PublicNext Desk
Kshetra Samachara

Kshetra Samachara

20/06/2022 07:50 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ