ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಂಡಮಯ ಬಜಪೆ ರಸ್ತೆ,ವಾಹನಗಳ ಸಂಚಾರಕ್ಕೆ ಕಷ್ಟಕರ

ಬಜಪೆ:ಬಜಪೆಯಿಂದ ಮಂಗಳೂರಿಗೆ ಸಾಗುವಂತಹ ರಾಜ್ಯ ಹೆದ್ದಾರಿಯ ಬಜಪೆಯ ಬಸ್ಸು ನಿಲ್ದಾಣದ ಸಮೀಪದಿಂದ ಮಸೀದಿ ತನಕದ ರಸ್ತೆಯು ತೀರ ಹದಗೆಟ್ಟ ಸ್ಥಿತಿಯಲ್ಲಿದೆ.ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು,ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಇದೀಗ ಮಳೆ ಕೂಡ ಆರಂಭವಾಗಿದ್ದು ರಸ್ತೆಯಲ್ಲಿನ ಹೊಂಡಗಳ ಲ್ಲಿ ನೀರು ತುಂಬಿ ಹೊಗಿದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಪರದಾಡುವಂತಾಗಿದೆ.

ಅಲ್ಲದೆ ಈ ರಸ್ತೆಯು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ,ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕ್ಕೆ ಸಾಗುವಂತಹ ರಸ್ತೆ ಇದಾಗಿದೆ.ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಒಡಾಟವನ್ನು ನಡೆಸುತ್ತಿದೆ.ಇದೀಗ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಹೊಂಡಮಯ ವಾಗಿರುದರಿಂದ ವಾಹನಗಳ ಓಡಾಟಕ್ಕೆ ಕಷ್ಟಕರವಾಗಿದೆ.

ಈ ಬಗ್ಗೆ ಸಂಬಂಧಪಟ್ಟವರು ರಸ್ತೆಯ ದುರಸ್ತಿ ಕಾರ್ಯ ನಡೆಸಬೇಕಿದೆ ಎಂಬುವುದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/06/2022 12:31 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ