ಮಂಗಳೂರು:ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿಯ ಇಂದಿರಾ ನಗರ ರೈಲ್ವೆ ಗೇಟ್ ಬಳಿ ರಾಶಿ ರಾಶಿ ಕಸವು ಸಂಗ್ರಹವಾಗಿದ್ದು,ಕಸವು ಕೊಳೆತು ದುರ್ವಾಸನೆ ಬೀರುತ್ತಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ನಿಂದ ಕಸ ಎಸೆಯದಿರಿ ಎಂಬ ನಾಮಫಲಕವನ್ನು ಹಾಕಿದ್ದರೂ ನಾಮಫಲಕದ ಬುಡದಲ್ಲಿಯೇ ರಾಶಿ ರಾಶಿ ಕಸ ಸಂಗ್ರಹವಾಗಿದ್ದು,ಆಳವಡಿಸಲಾಗಿದ್ದ ನಾಮ ಫಲಕವನ್ನು ಕ್ಯಾರೇ ಅನ್ನದೆ ಕಸವನ್ನು ಎಸೆದು ಹೋಗುತ್ತಿದ್ದಾರೆ ಅನ್ನುತ್ತಾರೆ ಸ್ಥಳೀಯರು.ಕಿನ್ನಿಗೋಳಿಯಿಂದ ಸುರತ್ಕಲ್,ಮಂಗಳೂರು ಹಾಗೂ ಇನ್ನಿತರ ಕಡೆಗಳಿಗೆ ಸಾಗಲು ಈ ಹಳೆಯಂಗಡಿ ರೈಲ್ವೆ ಗೇಟ್ ಮೂಲಕನೇ ಸಾಗಬೇಕಾಗುತ್ತದೆ.ಹಾಗಾಗಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚಾರವನ್ನು ನಡೆಸುತ್ತಿದೆ.ಆದರೆ ದಿನೇ ದಿನೇ ಕಸದ ರಾಶಿಯು ಹೆಚ್ಚಾಗುತ್ತಲೇ ಹೋಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಹಳೆಯಂಗಡಿ ಗ್ರಾಮ ಪಂಚಾಯತ್ ರೈಲ್ವೇ ಗೇಟ್ ಬಳಿ ಕಸ ಎಸೆದು ಹೋಗುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಾಗಿದೆ ಎಂಬುವುದು ಸ್ಥಳೀಯರ ಮಾತು.
Kshetra Samachara
13/06/2022 03:38 pm