ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯುವಶ

ಬಂಟ್ವಾಳ: ಮಂಗಳೂರು ಪಡೀಲ್ ನಲ್ಲಿ ಸ್ಕೂಟರ್ ನಲ್ಲಿ ಸಾಗುತ್ತಿದ್ದ ಸಂದರ್ಭ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಉಡುಪಿ ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲಾ ಲೆಕ್ಕಪತ್ರಪರಿಶೋಧಕರಾಗಿದ್ದು ನಿವೃತ್ತರಾಗಿದ್ದು, ಬಿ.ಸಿ.ರೋಡಿನ  ಕೆ.ಎನ್.ರಮೇಶ್ (67) ಚಿಕಿತ್ಸೆ ಫಲಕಾರಿಯಾಗದೆ ಮೇ 22ರಂದು ನಿಧನ ಹೊಂದಿದರು. ಪತ್ನಿ, ಮಗಳ ಸಹಿತ ಅಪಾರ ಬಂಧು ಬಳಗವನ್ನು ಅವರು ಹೊಂದಿದ್ದರು.

ಮೇ.7ರಂದು ಸಂಜೆ ಮಂಗಳೂರು ಪಡೀಲ್ ನಲ್ಲಿ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ಬರುತ್ತಿದ್ದ ಸಂದರ್ಭ ಕಾರೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ, ತಲೆಗೆ ತೀವ್ರ ಏಟಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 16 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೇ 22ರಂದು ಕೊನೆಯುಸಿರೆಳೆದರು.

Edited By : PublicNext Desk
Kshetra Samachara

Kshetra Samachara

23/05/2022 04:57 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ