ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಮೇಲ್ಭಾಗದಿಂದ ಬೃಹತ್ ಬಂಡೆಕಲ್ಲೊಂದು ಉರುಳಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ಬಂಡೆಕಲ್ಲು ಉರುಳಿ ಬಿದ್ದ ರಭಸಕ್ಕೆ ಮರಗಳು ಮುರಿದು ಬಿದ್ದಿದ್ದು,ದೇವಸ್ಥಾನ ದ ರಥಬೀದಿಯಿಂದ ಕಾರಿಂಜಬೈಲ್ ಸಂಪರ್ಕಿಸುವ ರಸ್ತೆಗೆ ಬಂಡೆಕಲ್ಲು, ಮರ ಬಿದ್ದು ರಸ್ತೆ ತಡೆಯುಂಟಾಗಿತ್ತು.

ಅರಣ್ಯ ಇಲಾಖೆಯ ಸಿಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ.

ಬೆಳಗ್ಗೆ ಸುಮಾರು 9 ಗಂಟೆಯ ಬಳಿಕ ಕಾರಿಂಜೇಶ್ವರನ ಸನ್ನಿಧಿಯ ಬಲ ಭಾಗದಲ್ಲಿದ್ದ ಬೃಹತ್ ಬಂಡೆ ಕಲ್ಲು ಕೆಳಗೆ ಉರುಳಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ಸಿಲುಕಿಕೊಂಡು ನಿಂತಿದೆ.

ಕಾರಿಂಜೇಶ್ವರನ ಸನ್ನಿಧಿ ಯ ಎಡಭಾಗದಲ್ಲಿತಡೆಗೋಡೆ ಕುಸಿದುಬಿದ್ದಿತ್ತು.

ಕಾರಿಂಜ ದೇವಸ್ಥಾನದ ಪರಿಸರದಲ್ಲಿ ನಡೆಸುತ್ತಿದ್ದ ಗಣಿಗಾರಿಕೆ ಪರಿಣಾಮವಾಗಿ ಇಲ್ಲಿ ಕುಸಿತವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ನಡೆಸಿದ ಹೋರಾಟದಿಂದ ಗಣಿಗಾರಿಕೆ ಸ್ಥಗಿತಗೊಂಡಿದೆ. ಇದೀಗ ಮತ್ತೆ ಬಂಡೆ ಕಲ್ಲು ಕುಸಿದಿದುದರಿಂದ ಗ್ರಾಮಸ್ಥರು ಕಾರಿಂಜೇಶ್ವರ ದೇವಸ್ಥಾನಕ್ಕೆ ಧಕ್ಕೆಯಾಗುವ ಆತಂಕದಲ್ಲಿದ್ದಾರೆ.

Edited By : PublicNext Desk
Kshetra Samachara

Kshetra Samachara

17/05/2022 12:24 pm

Cinque Terre

1.97 K

Cinque Terre

0

ಸಂಬಂಧಿತ ಸುದ್ದಿ